ಮಕ್ಕಳಿಗೆ ಶಿವಾಜಿಯ ಸಾಹಸ ಪರಿಚಯಿಸಿ: ಎಡಿಸಿ ಬಿ.ಸಿ.ಶಿವಾನಂದಮೂರ್ತಿ ಕಿವಿಮಾತು

Chhatrapati Shivaji Jayanti Mandya

ಮಂಡ್ಯ: ಶೌರ್ಯ, ಧೈರ್ಯ, ಸಾಹಸಕ್ಕೆ ಮತ್ತೊಂದು ಹೆಸರಾದ ಛತ್ರಪತಿ ಶಿವಾಜಿಯ ಸಾಧನೆ ಮತ್ತು ವ್ಯಕ್ತಿತ್ವವನ್ನು ಮಕ್ಕಳಿಗೆ ಪರಿಚಯಿಸಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮರಾಠ ಸಾಮ್ರಾಜ್ಯ ಸಂಸ್ಥಾಪಕ ಶಿವಾಜಿ ಅವರು ಚಿಕ್ಕದಾಗಿದ್ದ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿದರು. ಸಾಮಾನ್ಯ ಸೈನಿಕನ ಮಗನಾಗಿ ಜನಿಸಿದರೂ ಅಸಾಮಾನ್ಯವಾಗಿ ಸಾಧಿಸಲು ಸಾಧ್ಯವೆಂದು ತಿಳಿಸಿದ ಶಿವಾಜಿ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದರು.
ತನ್ನ ತಾಯಿ ಜೀಜಾಬಾಯಿಯ ಆದರ್ಶದಂತೆ ಸಾರ್ವಜನಿಕರ ಹಿತ ರಕ್ಷಣೆಗಾಗಿ ಶ್ರಮಿಸಿದ ಅವರ ವ್ಯಕ್ತಿತ್ವ ಮೆಚ್ಚುವಂತದ್ದು. ಇವತ್ತಿಗೂ ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ಛತ್ರಪತಿ ಶಿವಾಜಿ ಎಂದರೆ ತಪ್ಪಾಗುವುದಿಲ್ಲ. ಅವರ ಸಾಧನೆಯ ಹಾದಿಯಲ್ಲಿ ನಾವೆಲ್ಲರು ಸಾಗಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ವಿ.ಜೆ.ರೋಹಿಣಿ ಮಾತನಾಡಿ, ಮರಾಠ ಸಾಮ್ರಾಜ್ಯ ಎಂದರೆ ನಮಗೆಲ್ಲ ನೆನಪಾಗುವುದು ಛತ್ರಪತಿ ಶಿವಾಜಿ. ತನ್ನ ಸಾಮ್ರಾಜ್ಯಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಅವರ ಹೆಸರು ಇಂದಿಗೂ ಇತಿಹಾಸದಲ್ಲಿ ಅಜರಾಮರ. ಇಂತಹ ಮಹಾನ್ ವ್ಯಕ್ತಿಗಳ ಸಾಧನೆಯನ್ನು ನಾವು ಮೆಲುಕು ಹಾಕೋಣ ಎಂದರು.
ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಣಾಧಿಕಾರಿ ಆರ್.ಮಹದೇವಪ್ಪ, ಮರಾಠ ಸಾಮ್ರಾಜ್ಯದ ಶೂರ, ವೀರ, ಧೀಮಂತ ದೊರೆ ಛತ್ರಪತಿ ಶಿವಾಜಿ. ಒಬ್ಬ ದೊರೆಯಾಗಿ ತನ್ನ ಸಾಮ್ರಾಜ್ಯಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದ್ದು, ಯುದ್ಧ ನೀತಿಯಲ್ಲಿ ಪರಿಣಿತರಾದ ಶಿವಾಜಿಯೊಂದಿಗೆ ಯುದ್ಧ ಎಂದರೆ ಅಂದಿನ ರಾಜರಲ್ಲಿ ನಡುಕ ಉಂಟಾಗುತ್ತಿತ್ತು. ತನ್ನ ಜಾಣ್ಮೆ ಹಾಗೂ ಯುದ್ಧ ಕೌಶಲದಿಂದ 45ಕ್ಕೂ ಹೆಚ್ಚು ಕೋಟೆಯನ್ನು ವಶಪಡಿಸಿಕೊಂಡಿದ್ದರು. ಅವರ ಯುದ್ಧ ತಂತ್ರದಲ್ಲಿ ವಿಶೇಷವಾದ ಸಂಗತಿ ಏನೆಂದರೆ ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಹಿಂಸಿಸುವಂತಿರಲಿಲ್ಲ. ಸಾಮಾನ್ಯ ಜನರಿಗೆ ನಮ್ಮ ಹೋರಾಟ ಎಂದಿಗೂ ತೊಂದರೆ ಉಂಟುಮಾಡಬಾರದು ಎನ್ನುವ ಅವರ ಮನೋಭಾವನೆ ಶ್ಲಾಘನೀಯ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಬಿ.ವಿ.ನಂದೀಶ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಸಮುದಾಯ ಮುಖಂಡರಾದ ಶಿವರಾಂ, ಸುರೇಶ್‌ರಾವ್, ಅಂಬುಜಿರಾವ್, ನಾಗೇಂದ್ರರಾವ್ ಇತರರಿದ್ದರು.

Share This Article

ಹೋಟೆಲ್​ ಸ್ಟೈಲ್​​ ಮಸಾಲಾ ವಡೆ ಮನೆಯಲ್ಲೇ ಮಾಡಿ; ಇಲ್ಲಿದೆ ಸಿಂಪಲ್​ ರೆಸಿಪಿ | Recipe

ಮಸಾಲಾ ವಡೆ ಯಾರಿಗೆ ಇಷ್ಟವಿರಲ್ಲ ಹೇಳಿ. ಆದರೆ ಮನೆಯಲ್ಲಿ ಮಾಡುವ ಕಡಲೆಬೇಳೆ ವಡೆ ಹೋಟೆಲ್​ ರುಚಿ…

ಬೇಸಿಗೆಯಲ್ಲಿ ಪುದೀನಾ ಚಹಾ ಕುಡಿಯುವುದರಿಂದ ಆಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ಉಪಯುಕ್ತ ಮಾಹಿತಿ ’ Health Tips

ಭಾರತೀಯರ ದಿನಚರಿಯ ಪ್ರಮುಖ ಭಾಗವೆಂದರೆ ಚಹಾ. ಭಾರತದ ಪ್ರತಿಯೊಂದು ಮೂಲೆಯಲ್ಲೂ ನೀವು ಚಹಾ ಪ್ರಿಯರನ್ನು ಕಾಣಬಹುದು.…

ಕ್ಯಾನ್ಸರ್​ ಮಾತ್ರವಲ್ಲ.. ಧೂಮಪಾನದಿಂದ ಬರುವ ಅಪಾಯಕಾರಿ ಕಾಯಿಲೆಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಭಾರತದಲ್ಲಿ ಧೂಮಪಾನವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರಲ್ಲಿ ಇದರ ಅಭ್ಯಾಸ…