ಬಾಕ್ಸಿಂಗ್​ ಡೇ ಟೆಸ್ಟ್​: ಭರ್ಜರಿ ಶತಕ ಗಳಿಸಿದ ಚೇತೇಶ್ವರ ಪೂಜಾರ

ಮೊಲ್ಬೋರ್ನ್​: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಚೇತೇಶ್ವರ ಪೂಜಾರ ಭರ್ಜರಿ ಶತಕ ಗಳಿಸಿದ್ದಾರೆ.

ಮೊದಲ ದಿನ ತಾಳ್ಮೆಯ ಬ್ಯಾಟಿಂಗ್​ ಮಾಡಿದ್ದ ಪೂಜಾರ ಎರಡನೇ ದಿನವೂ ಅದೇ ಲಯದಲ್ಲಿ ಬ್ಯಾಟಿಂಗ್​ ಮುಂದುವರಿಸಿದ್ದು, ಟೆಸ್ಟ್​ ಕ್ರಿಕೆಟ್​ನಲ್ಲಿ 17ನೇ ಶತಕ ದಾಖಲಿಸಿದರು. ಪೂಜಾರ ಭೋಜನ ವಿರಾಮದ ವೇಳೆಗೆ 294 ಎಸೆತಗಳನ್ನು ಎದುರಿಸಿ 103* ರನ್​ ಗಳಿಸಿದ್ದಾರೆ.

ಪೂಜಾರಗೆ ಉತ್ತಮ ಸಾಥ್​ ನೀಡಿದ ನಾಯಕ ವಿರಾಟ್​ ಕೊಹ್ಲಿ ಮತ್ತೊಂದು ಅರ್ಧಶತಕ ಪೂರೈಸಿದ್ದು, ಭೋಜನ ವಿರಾಮದ ವೇಳೆಗೆ 69* ರನ್​ ಗಳಿಸಿದ್ದಾರೆ.

ಮೊದಲ ದಿನದಂತ್ಯಕ್ಕೆ 2 ವಿಕೆಟ್​ ನಷ್ಟಕ್ಕೆ 215 ರನ್​ ಗಳಿಸಿದ್ದ ಭಾರತ ತಂಡ ಎರಡನೇ ದಿನದ ಮೊದಲ ಅವಧಿಯಲ್ಲಿ 62 ರನ್​ ಕಲೆ ಹಾಕಿದ್ದು, ಭೋಜನ ವಿರಾಮದ ವೇಳೆಗೆ 2 ವಿಕೆಟ್​ ನಷ್ಟಕ್ಕೆ 277 ರನ್​ ಗಳಿಸಿದೆ.