ಜಗತ್ತಿನಲ್ಲಿ ತಾಯ್ತನ ಎಂಬುದು ವರ್ಣಿಸಲಾಗದ ದಿವ್ಯ ಅನುಭವ

ಕೊಪ್ಪ: ಮಹಿಳೆಯರು ಕೆಲಸ ಮಾಡದ ಕ್ಷೇತ್ರವಿಲ್ಲ. ದುರದೃಷ್ಟ ಎಂದರೆ ಎಲ್ಲ ರಂಗಗಳಲ್ಲಿ ತೊಡಗಿರುವುದರಿಂದ ಅವರಿಗೆ ಮನೆಯಲ್ಲಿ ಇರಲು, ತನ್ನ ಸಂಸಾರದ ಜತೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಅದಮ್ಯ ಚೇತನ ಟ್ರಸ್ಟ್ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಹೇಳಿದರು.

ಹರಿಹರಪುರದ ಪ್ರಬೋಧಿನಿ ಗುರುಕುಲದಲ್ಲಿ ಅರ್ಧಮಂಡಲೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಮಾತೃಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ಮಾತೆಯರಿಂದ ಮಾತ್ರ ಸಾಧ್ಯ. ಆಕೆಯ ಸಂಯಮ, ತಾಳ್ಮೆ ಸಂಸಾರಕ್ಕೆ ಆಧಾರ ಸ್ತಂಭವಿದ್ದಂತೆ. ಒಳ್ಳೆಯ ಸಂಸಾರ ರಚನೆಯಾದರೆ ಒಳ್ಳೆಯ ದೇಶ ನಿರ್ವಣವಾಗುತ್ತದೆ. ತಾಯಿಯನ್ನು ಮೊದಲ ಗುರು ಎಂದು ನಂಬಿದವರು ನಾವು. ತಾಯಿ ನಮಗೆ ಪ್ರಕೃತಿಯೊಂದಿಗೆ ಬದುಕುವ ಕಲೆ ಕಲಿಸುತ್ತಾಳೆ ಹಾಗೂ ಸನಾತನ ಸಂಸ್ಕೃತಿ ಬಗ್ಗೆ ತಿಳಿಸುತ್ತಾಳೆ ಎಂದರು.

ಹೊರನಾಡಿನ ರಾಜಲಕ್ಷ್ಮೀ ಭೀಮೇಶ್ವರ ಜೋಶಿ ಮಾತನಾಡಿ, ಜಗತ್ತಿನಲ್ಲಿ ತಾಯ್ತನ ಎಂಬುದು ವರ್ಣಿಸಲಾಗದ ದಿವ್ಯ ಅನುಭವ. ಅದು ದೇವರು ಹೆಣ್ಣಿಗೆ ನೀಡಿದಂಥ ವರ. ತಾಯ್ತನ ಪಡೆಯಲು ನೂರಾರು ವರ್ಷದ ಪುಣ್ಯ ಪಡೆದಿರಬೇಕು. ಪೂರ್ವಜನ್ಮದ ಯೋಗದ ಫಲವಾಗಿ ಮಾತೃಭಾಗ್ಯ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *