ಪ್ರಾಮಾಣಿಕತೆ ಮೆರೆದ ಪೋಲಿಸರು

ಚನ್ನಮ್ಮ ಕಿತ್ತೂರು: ಕಿತ್ತೂರು ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಜನದಟ್ಟಣೆ ಹೆಚ್ಚಾಗಿ ಹಣ ಮತ್ತು ದಾಖಲೆ ಕಳೆದುಕೊಂಡು ಪರದಾಡುತ್ತಿದ್ದ ಬಡದಂಪತಿಗೆ ಹಣ ಮತ್ತು ದಾಖಲೆ ತಲುಪಿಸಿ ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ.

ಉಗರಖೋಡ ಗ್ರಾಮದ ಕಮಲವ್ವ ಹುಲಮನಿಕೆಲಸದ ನಿಮಿತ್ತ ಬ್ಯಾಂಕ್ ಪಾಸ್‌ಬುಕ್, ಆಧಾರ್, ಪಡಿತರ ಚೀಟಿ ಸೇರಿ 3000 ರೂ. ಹಣ ತೆಗೆದುಕೊಂಡು ಕಿತ್ತೂರು ಪಟ್ಟಣಕ್ಕೆ ಬಂದಿದ್ದರು. ಆದರೆ ಉತ್ಸವದ ಜನದಟ್ಟಣೆಯಲ್ಲಿ ಹಣ ಮತ್ತು ದಾಖಲೆ ಕಳೆದುಕೊಂಡು ಪರದಾಡುತ್ತಿದ್ದರು. ದಾಖಲೆ ಮತ್ತು ಹಣ ಪೊಲೀಸರಿಗೆ ಸಿಕ್ಕಿದ್ದವು. ದಾಖಲೆಯೊಂದಿಗೆ ಬಿಳಿ ಹಾಳೆಯಲ್ಲಿ ಕುಟುಂಬಸ್ಥರ ದೂರವಾಣಿ ಸಂಖ್ಯೆ ಸಿಕ್ಕಿತ್ತು. ಈ ಚೀಟಿ ಗಮನಿಸಿದ ಪೊಲೀಸರು ದೂರವಾಣಿ ಕರೆ ಮಾಡಿ, ದಂಪತಿ ಪತ್ತೆ ಹಚ್ಚಿ ಹಣ ಮತ್ತು ದಾಖಲೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಚಿಕ್ಕೋಡಿ ಸಂಚಾರಿ ಎ.ಎಸ್.ಐ ಜಿ.ಜಿ.ಹಂಪನವರ, ಹವಾಲ್ದಾರ್ ಕೆ.ಬಿ.ಕಂಠಿ, ಯಮಕನಮರಡಿ ಠಾಣೆಯ ಪೇದೆಗಳಾದ ಆರ್.ಎಸ್.ಹುಚರೆಡ್ಡಿ, ಶಿವಲಿಂಗಪ್ಪ ಕೆ.ಆರ್, ಎಸ್.ಎಸ್.ಚೌಗಲಾ, ಕೆ.ಬಿ.ಮನಗುತ್ತಿ ಮತ್ತು ಜಿ.ಎಸ್.ಜಮಾದಾರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.