ಚೆನ್ನೈ: ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಗೌರವಾರ್ಥವಾಗಿ ಚೆನ್ನೈ ನಗರದ ರಸ್ತೆಯೊಂದಕ್ಕೆ ಅವರ ಹೆಸರಿಡಲು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಸಜ್ಜಾಗಿದೆ. ಶೀಘ್ರದಲ್ಲಿ ರಸ್ತೆಯ ಮರುನಾಮಕರಣವನ್ನು ಅಧಿಕೃತಪಡಿಸಲಾಗುವುದು ಎಂದು ವರದಿಯಾಗಿದೆ.
ಅಶ್ವಿನ್ ಅವರ ತವರು ನಗರ ಹಾಗೂ ಹಾಲಿ ನೆಸೆಸಿರುವ ಪಶ್ಚಿಮ ಮಾಂಬಲಂನಲ್ಲಿರುವ ರಾಮಕೃಷ್ಣಪುರಂ ಮೊದಲನೇ ಬೀದಿಗೆ ಮರುನಾಮಕರಣ ಮಾಡಲು ಜಿಸಿಸಿ ನಿರ್ಧರಿಸಿದೆ. ಅಶ್ವಿನ್ ಒಡೆತನದ ಕೇರಂ ಬಾಲ್ ಈವೆಂಟ್ ಮತ್ತು ಮಾರ್ಕೆಂಟಿಂಗ್ ಕಂಪನಿ ಪ್ರೈವೆಟ್ ಲಿಮಿಟೆಡ್, ನಗರದ ಆರ್ಯಗೌಡ ಅಥವಾ ರಾಮಕೃಷ್ಣಪುರಂ ರಸ್ತೆಗೆ ಮರುನಾಮಕರಣ ಮಾಡುವಂತೆ ಜಿಸಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯ ಪರಿಶೀಲನೆಯ ನಂತರ ಜಿಸಿಸಿ ರಾಮಕೃಷ್ಣಪುರಂ ರಸ್ತೆಗೆ ಮರುನಾಮಕರಣ ಮಾಡಲು ನಿರ್ಧರಿಸಿದೆ. ಅಶ್ವಿನ್ ಕಳೆದ ವರ್ಷಾಂತ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.
2025ರ ಬಜೆಟ್‌ಗಾಗಿ ಮೇಯರ್ ಆರ್. ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲೂ ‘ರವಿಚಂದ್ರನ್ ಅಶ್ವಿನ್ ಬೀದಿ’ ಎಂದು ಮರುನಾಮಕರಣಕ್ಕೆ ಮಾಡಲಾದ ಪ್ರಸ್ತಾವನೆಗೆ ಸಮ್ಮತಿ ದೊರೆತಿದೆ. ಇದರೊಂದಿಗೆ ಹಾಕಿ ಮಾಜಿ ಗೋಲು ಕೀಪರ್ ಪಿಆರ್ ಶ್ರೀಜೇಶ್ ಮತ್ತು ಕನ್ನಡಿಗ ಅನಿಲ್ ಕುಂಬ್ಳೆ ಅವರ ಸಾಲಿಗೆ ಅಶ್ವಿನ್ ಸೇರ್ಪಡೆಯಾಗಿದ್ದು, ಪ್ರಪಂಚದಾದ್ಯಂತ ಹಲವು ಬೀದಿಗಳಿಗೆ ಕ್ರಿಕೆಟಿಗರ ಹೆಸರಿಡಲಾಗಿದೆ. ಆರ್.ಅಶ್ವಿನ್ 9 ವರ್ಷಗಳ ಬಳಿಕ ತವರು ್ರಾಂಚೈಸಿ ಸಿಎಸ್‌ಕೆ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದು, ಮೆಗಾ ಹರಾಜಿನಲ್ಲಿ ₹9.75 ಕೋಟಿ ಬಿಡ್ ಪಡೆದುಕೊಂಡಿದ್ದರು.