ಬಸ್ ದಿನ ಮೋಜಿನಲ್ಲಿ ಅದೃಷ್ಟ ಕೈಕೊಟ್ಟಿದ್ದರೆ ಚೆನ್ನೈನ ಈ ವಿದ್ಯಾರ್ಥಿಗಳ ಮಾರಣಹೋಮವಾಗುತ್ತಿತ್ತು! ಹೀಗಿದೆ ಅವರ ಹುಡುಗಾಟ…

ಚೆನೈ: ಚೆನ್ನೈನಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು “ಬಸ್ ದಿನ” ವನ್ನು ಆಚರಿಸುವ ವೇಳೆ, ಬಸ್ಸಿನ ಮೇಲೆ ಹತ್ತಿದ್ದು ಬಸ್​ ಚಲಿಸುವ ವೇಳೆ ಚಾಲಕ ದಿಢೀರನೆ ಬ್ರೇಕ್​ ಹಾಕಿದ್ದರಿಂದ ಸಾಮೂಹಿಕವಾಗಿ ಕೆಳಗೆ ಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಘಟನೆಗೆ ಸಂಬಂಧಿಸಿದಂತೆ ಬಸ್​ ಚಾಲಕ ಬ್ರೇಕ್​ ಹಾಕಿದ್ದರಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್​ನ ಮುಂಭಾಗಕ್ಕೆ ಬಿದ್ದಿದ್ದು ಕೆಲವು ಇಂಚುಗಳ ಅಂತರದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ಚೆನೈ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆ ಉಂಟು ಮಾಡಿದ್ದರಿಂದ 24 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬೇಸಿಗೆ ರಜೆಯ ನಂತರ ಕಾಲೇಜಿನ ಮೊದಲ ದಿನ ವಿದ್ಯಾರ್ಥಿಗಳು ಈ ದಿನವನ್ನು ಆಚರಿಸುತ್ತಿದ್ದಾರೆ. ಚೆನ್ನೈ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿದ್ದರೂ ಸಹ ಆಚರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಬಸ್ಸಿನ ಮೇಲೆ ಹತ್ತುವ ಹಾಗೂ ಸಾಹಸ ಮಾಡಲು ಪ್ರಯತ್ನಿಸುತ್ತಿರುವುದರಿಂದ ಹಿಂದೆ ಸರಿಯುತ್ತಿಲ್ಲ.

ಪೊಲೀಸರ ಕಟ್ಟುನಿಟ್ಟಿನ ಎಚ್ಚರಿಕೆ ನಂತರವೂ, ಪಚಾಯಪ್ಪ ಕಾಲೇಜು ಮತ್ತು ಚೆನ್ನೈನ ಅಂಬೇಡ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಬಸ್ ದಿನವನ್ನು ಆಚರಿಸಿದ್ದು ಕ್ಯಾಮೆರಾ ಕಣ್ಣಲ್ಲಿ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಳೆಯ ವಿದ್ಯಾರ್ಥಿಗಳು ಬಸ್ ದಿನವನ್ನು ಆಚರಿಸಲು ಹೊಸ ವಿದ್ಯಾರ್ಥಿಗಳಿಗೆ ಪ್ರಚೋದಿಸಿದ್ದರು ಎನ್ನಲಾಗಿದೆ. ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿಗಳು ಕಿಟಕಿ, ಬಾಗಿಲುಗಳಲ್ಲಿ ನೇತಾಡುತ್ತ ಬಸ್​ ಮೇಲೆ ಏರುತ್ತಿರುವ ವಿಡಿಯೋ ಸಹ ವೈರಲ್​ ಆಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *