ಅನುಬಂಧಗಳು 2019ರ ಲೋಕಸಭೆ ಚುನಾವಣೆಯ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತು: ಮೋದಿ

ವಾರಾಣಸಿ: ಜನತೆಯೊಂದಿಗಿನ ವಿಶೇಷ ಅನುಬಂಧಗಳು 2019ರ ಲೋಕಸಭೆ ಚುನಾವಣೆಯ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತು ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಕ್ಷೇತ್ರ ವಾರಾಣಸಿಗೆ ಸೋಮವಾರ ಭೇಟಿ ನೀಡಿದ್ದ ಅವರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಉತ್ತರ ಪ್ರದೇಸ ರಾಜಕೀಯ ಹೊಸ ದಿಕಿನತ್ತ ಸಾಗುತ್ತಿದೆ. 2014, 2017 ಮತ್ತು 2019ರಲ್ಲಿ ಹ್ಯಾಟ್ರಿಕ್​ ಸಾಧನೆ ಸಣ್ಣದೇನಲ್ಲ. ಇಷ್ಟಾಗಿಯೂ ರಾಜಕೀಯ ಪಂಡಿತರ ಕಣ್ತೆರೆದುಕೊಳ್ಳಲಿಲ್ಲ ಎಂದರೆ, ಅವರ ಕಿವಿಗಳು ಕೇಳಿಸಲಿಲ್ಲ ಎಂದರೆ ಅವರೆಲ್ಲರೂ 20ನೇ ಶತಮಾನದಲ್ಲಿ ಬದುಕುತ್ತಿದ್ದಾರೆ ಎಂದೇ ಅರ್ಥ. ಚುನಾವಣಾ ರಾಜಕಿಐದಾಚೆಗೆ ಅನುಬಂಧವಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ದೇಶ ನನ್ನನ್ನು ಪ್ರಧಾನಿಯನ್ನಾಗಿ ಮಾಡಿರಬಹುದು. ಆದರೆ, ನಾನು ನಿಮ್ಮ ಕಾರ್ಯಕರ್ತ. ನಿಮ್ಮ ಆಜ್ಞಾಧಾರಕ. ಲೋಕಸಭೆ ಚುನಾವಣೆ ವೇಳೆ ಒಂದು ತಿಂಗಳು ಕ್ಷೇತ್ರಕ್ಕೆ ಬರುವುದು ಬೇಡ. ನಿಮ್ಮ ಪರವಾಗಿ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದಿರಿ. ಅದರಂತೆ ಬರಲಿಲ್ಲ. ನೀವು ನನ್ನ ಕೈಬಿಡಲಿಲ್ಲ ಎಂದು ಹೇಳಿದರು.

ಚುನಾವಣಾ ಪ್ರಚಾರ ಮುಗಿದ ಬಳಿಕ ವಾರಾಣಸಿಗೆ ಬರಬೇಕು ಎನಿಸುತ್ತಿತ್ತು. ಆದರೆ, ನಿಮ್ಮ ಆದೇಶ ನೆನಪಾಗುತ್ತಿತ್ತು. ಹಾಗಾಗಿ ಇಲ್ಲಿಗೆ ಬಾರದೆ ಆರಾಮವಾಗಿದ್ದೆ. ಚುನಾವಣೆ ವೇಳೆ ಒಬ್ಬ ಅಭ್ಯರ್ಥಿ ನಿಶ್ಚಿಂತೆಯಿಂದ ಇರುವುದು ಅಪರೂಪ. ನಿಮ್ಮ ಪರಿಶ್ರಮದ ಬಗ್ಗೆ ಅರಿವಿದ್ದುದರಿಂದ ನಾನು ನಿಶ್ಚಿಂತೆಯಿಂದ ಇದ್ದೆ. ನೇರವಾಗಿ ಕೇದಾರನಾಥಕ್ಕೆ ಹೋಗಿ ಪೂಜೆ ಸಲ್ಲಿಸಿದೆ. ನೀವೆಲ್ಲರೂ ಸೇರಿ ನನ್ನನ್ನು ಗೆಲ್ಲಿಸಿದಿರಿ. ಇದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದರು.

ಎರಡು ಬಗೆಯ ಸವಾಲುಗಳು
ಬಿಜೆಪಿಯವರು ಎರಡು ಬಗೆಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಮ್ಮ ತತ್ವಸಿದ್ಧಾಂತಗಳಲ್ಲಿನ ನಂಬಿಕೆಯನ್ನು ಸಹಿಸಲಾಗದೆ ನಮ್ಮ ಕಾರ್ಯಕರ್ತರನ್ನು ಕೊಲ್ಲಲಾಗುತ್ತಿದೆ. ತ್ರಿಪುರಾ, ಪಶ್ಚಿಮ ಬಂಗಾಳ ಹಾಗೂ ಜಮ್ಮ ಮತ್ತು ಕಾಶ್ಮೀರದ ಇಂಥ ಹಲವು ಘಟನೆಗಳು ನಡೆದಿವೆ ಎಂದು ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದರು.

ದಿನದಿಂದ ದಿನಕ್ಕೆ ರಾಜಕೀಯ ಅಸ್ಪೃಶ್ಯತೆ ಹೆಚ್ಚಾಗುತ್ತಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಅಲ್ಲದೆ, ಪ್ರಜಾತಂತ್ರ ವಿರೋಧಿ ನಿಲುವು. ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಕುರಿತು ಯಾವುದಾದರೂ ಪಕ್ಷ ಚಿಂತನೆ ನಡೆಸಿದೆ ಎಂದರೆ ಅದರು ಬಿಜೆಪಿ ಮಾತ್ರ ಎಂದು ಹೇಳಿದರು.

ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ಸೀಟುಗಳನ್ನು ಗೆದ್ದುಕೊಂಡಿದ್ದೇವೆ. ಗೋವಾದಲ್ಲಿ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿದ್ದೇವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಶ್ಮೀರ ಕಣಿವೆಯಿಂದ ಹಿಡಿದು ಕೇರಳದವರೆಗೆ ಬಿಜೆಪಿಯ ಶೇಕವಾರು ಮತಗಳಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೂ ರಾಜಕೀಯ ಪಂಡಿತರು ಬಿಜೆಪಿಯನ್ನು ಹಿಂದಿ ರಾಜ್ಯಗಳ ಪಕ್ಷ ಎಂದೇ ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *