ರಾಸಾಯನಿಕ ಬಳಕೆಯಿಂದ ಫಲವತ್ತತೆ ನಾಶ

ಚಿಕ್ಕೋಡಿ: ಮಿತಿಮೀರಿದ ರಾಸಾಯನಿಕ ಬಳಸಿ ವಿಷಯುಕ್ತ ಆಹಾರ ಬೆಳೆಯುತ್ತಿದ್ದೇವೆ. ಹಾಗಾಗಿ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತಿದ್ದೇವೆ ಎಂದು ಗೋಕಾಕ ತಾಲೂಕಿನ ಕಲ್ಲೋಳ್ಳಿಯ ಪ್ರಗತಿಪರ ರೈತ ಬಾಳಪ್ಪ ಬೆಳಕೂಡ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಬಸವನಾಳಗಡ್ಡೆಯ ಡಿವೈಎಸ್‌ಪಿ ಬಸವರಾಜ ಮಗದುಮ್ಮ ಅವರ ವೇದಾಮೃತ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾವಯವ ಕೃಷಿ ಜಾಗೃತಿ ಸಮಾರಂಭ ಉದ್ದೇಶಿಸಿ ಮಾತನಾಡಿ, ಭೂಮಿಯ ಫಲವತ್ತತೆ ಕಾಯ್ದುಕೊಂಡು, ಆರೋಗ್ಯಯುತವಾದ ಆಹಾರ ಸೇವನೆಗಾಗಿ ಪ್ರತಿಯೊಬ್ಬರೂ ಸಾವಯವ ಕೃಷಿ ಮಾಡುವತ್ತ ಗಮನಹರಿಸಬೇಕಾದ ಅಗತ್ಯವಿದೆ ಎಂದರು.

ಡಾ.ಎಸ್.ಎ.ಬೆಳಗಲಿ ಮಾತನಾಡಿ, ಇಂದು ಪ್ರತಿಯೊಬ್ಬರೂ ವಿಷಯುಕ್ತ ಆಹಾರ ಸೇವನೆ ಮಾಡುತ್ತಿರುವುದರಿಂದ ಆರೋಗ್ಯ ಹದಗೆಡುತ್ತಿದ್ದು, ಗಳಿಸಿದ ಹಣ ಔಷಧೋಪಚಾರಕ್ಕೆ ಹೋಗುತ್ತಿರುವುದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಅಕ್ಕಾತಾಯಿ ಮಗದುಮ್ಮ, ಭರಮಗೌಡ ನಾಯಕ್, ಅರುಣ ಮಾಳಿ, ಅಶೋಕ ಕೊಪ್ಪದ, ಬಿ.ಎ.ಮೇಕನಮರಡಿ, ರಾಜಶೇಖರ ಹಿರೇಮಠ, ರಮೇಶ ಹಿತ್ತಲಮನಿ ಸೇರಿ ಪ್ರಗತಿಪರ ರೈತರು ಸಾವಯವ ಕೃಷಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಡಿ.ವೈ.ಎಸ್.ಪಿ ಬಸವರಾಜ ಮಗದುಮ್ಮ ಸ್ವಾಗತಿಸಿದರು. ಎಸ್.ಆರ್.ಡೊಂಗರೆ ನಿರೂಪಿಸಿದರು. ಸುಭಾಷ ಮುನ್ನೋಳ್ಳಿ ವಂದಿಸಿದರು.

Leave a Reply

Your email address will not be published. Required fields are marked *