More

    ಚೇಳ್ಳಗುರ್ಕಿ ಶ್ರೀ ಎರ್ರಿತಾತ ಮಹಾರಥೋತ್ಸವ ಅದ್ದೂರಿ

    ಬಳ್ಳಾರಿ: ತಾಲೂಕಿನ ಶ್ರೀಕ್ಷೇತ್ರ ಚೇಳ್ಳಗುರ್ಕಿ ಗ್ರಾಮದ ಜೀವಸಮಾಧಿ ಶ್ರೀ ಎರ್ರಿತಾತ ಅವರ ಶತಮಾನೋತ್ಸವ ನಿಮಿತ್ತ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

    ರಥೋತ್ಸವಕ್ಕೆ ಭಕ್ತರು ಹೂವು-ಹಣ್ಣು, ಉತ್ತತ್ತಿ ತೂರಿ ಭಕ್ತಿ ಸಮರ್ಪಿಸಿದರು. ತೇರು ಬೀದಿಯಲ್ಲಿ ಸಾಗುತ್ತಿರುವಾಗ ಭಕ್ತರು ‘ಪವಾಡ ಪುರುಷ ಎರ್ರಿತಾತ’, ಭಕ್ತರ ಕಾಯೋ ದೈವನಿಧಿಯೇ’ ಎಂದು ಜಯಘೋಷ ಕೂಗಿದರು. ನವದಂಪತಿಗಳು ತೇರಿನ ಕಲಶ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಶ್ರೀ ಎರ‌್ರಿಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಚ್.ಬಾಳನಗೌಡ, ದಾಸೋಹ ಸೇವಾ ಸಂಘದ ಅಧ್ಯಕ್ಷ ಸಿ.ಕೆ.ಪೊಂಪನಗೌಡ ಹಾಗೂ ಕಮೀಟಿ ಪದಾಧಿಕಾರಿಗಳು ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಿದರು.

    ಇದನ್ನೂ ಓದಿ: ಚೇಳ್ಳಗುರ್ಕಿ ಗ್ರಾಮದಲ್ಲಿ ಶ್ರೀಎರ್ರಿತಾತನ ಮುತ್ತಿನ ರಥೋತ್ಸವ ಸಂಪನ್ನ

    ಮೂರ್ತಿಗೆ ವಿಶೇಷ ಪೂಜೆ, ಪುಷ್ಪಾಲಂಕಾರ

    ಶ್ರೀಮಠದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ಶ್ರೀ ಎರ್ರಿಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು. ಬೆಳಗ್ಗೆ ನೂರಾರು ಭಕ್ತರ ಸಮ್ಮುಖದಲ್ಲಿ ಮಡಿತೇರು ಎಳೆಯಲಾಯಿತು. ರಥೋತ್ಸವ ಹಿನ್ನಲೆಯಲ್ಲಿ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರಿಗೆ ಮಠದಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.

    ರಥೋತ್ಸವ ಬಳಿಕ ದೇವಸ್ಥಾನದಲ್ಲಿ ಕರ್ಪೂರದ ಆರತಿ ಕಾರ್ಯಕ್ರಮ ಜರುಗಿತು. ನೂರಾರು ಮಹಿಳೆಯರು ದೇವಸ್ಥಾನಕ್ಕೆ ಆಗಮಿಸಿ ಕರ್ಪೂರದ ಆರತಿ ಹಿಡಿದು ಮಠದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿ ಇಷ್ಠಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಮೇ 26 ರಂದು ಶುಕ್ರವಾರ ಶ್ರೀ ಎರ‌್ರಿತಾತನವರ ಹೂವಿನ ರಥೋತ್ಸವ ಜರುಗಲಿದ್ದು, ಬಳಿಕ ಬಾಣ ಬಿರುಸುಗಳ ಪ್ರದರ್ಶನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts