ನ್ಯಾಮತಿ: ತಾಲೂಕಿನ ಯರಗನಾಳ್ ರಸ್ತೆಯ ಹೊರವಲಯದ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಶುಕ್ರವಾರ ತಡರಾತ್ರಿ ಚಿರತೆ ಓಡಾಟದ ದೃಶ್ಯ ಸೆರೆಯಾದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಶನಿವಾರ ಉಜ್ಜಿನಿ ಮಟ್ಟಿಯ ಬಳಿ ಚಿರತೆ ಸೆರೆಗೆ ಬೋನು ಇರಿಸಿದರು.
ಕಳೆದ ಒಂದು ತಿಂಗಳಿಂದ ನ್ಯಾಮತಿ ಹಾಗೂ ಸುರಹೊನ್ನೆ ಹೊರವಲಯದಲ್ಲಿ ಚಿರತೆ ಓಡಾಟದ ಬಗ್ಗೆ ಗ್ರಾಮಸ್ಥರಿಂದ ದೂರು ಬರುತ್ತಿದ್ದರಿಂದ ಅರಣ್ಯ ಅಧಿಕಾರಿ ಕಿಶೋರ್ ನಾಯ್ಕ ಅವರ ಮಾರ್ಗದರ್ಶನದಂತೆ ಅಧಿಕಾರಿಗಳು ಬೋನು ಇರಿಸಿದ್ದು, ಚಿರತೆ ಸೆರೆಗೆ ತೀವ್ರ ನಿಗಾ ವಹಿಸಿದೆ.
ಚಿರತೆ ಸೆರೆ ಹಿಡಿಯುವವರೆಗೂ ಸಾರ್ವಜನಿಕರು ಒಬ್ಬಂಟಿಯಾಗಿ ಓಡಾಡದಂತೆ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಬೋನು ಅಳವಡಿಸುವ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಅಲಿ, ಗಸ್ತು ಅರಣ್ಯ ಪಾಲಕರಾದ ಅಂಜಲಿ ಎಚ್.ಪಿ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದ್ದರು.