ಹುಬ್ಬಳ್ಳಿ: ಕಳೆದ ಆಗಸ್ಟ್ ನಲ್ಲಿ ಜರುಗಿದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ.ಜೆ. ಛೇಡಾ ಖಾಸಗಿ ಅನುದಾನಿತ ಐಟಿಐ ಶೇ. 98ರಷ್ಟು ಫಲಿತಾಂಶ ದಾಖಲಿಸಿದೆ.
ಇಲೆಕ್ಟ್ರಿಷಿಯನ್ ವಿಭಾಗದಲ್ಲಿ ಶೇ. 100, ಇಲೆಕ್ಟ್ರಾನಿಕ್ ಮೆಕ್ ಶೇ. 92, ಫಿಟ್ಟರ್ ಶೇ. 100, ಟರ್ನರ್ ಶೇ. 100, ಮೆಕ್ಯಾನಿಕ್ ಡೀಸೆಲ್ ಶೇ. 100, ವೆಲ್ಡರ್ ಶೇ. 96ರಷ್ಟು ಫಲಿತಾಂಶ ದಾಖಲಾಗಿದೆ.
ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ, ಉಪಾಧ್ಯ ಧನಪಾಲ ಮುನ್ನೊಳಿ, ಕಾರ್ಯದರ್ಶಿ ಆರ್.ಟಿ. ಅಣ್ಣಿಗೇರಿ, ಸಹ ಕಾರ್ಯದರ್ಶಿ ವಿಮಲಕೀರ್ತಿ ತಾಳಿಕೋಟಿ, ಖಜಾಂಚಿ ಆರ್.ಟಿ.ತವನಪ್ಪನವರ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.