More

  ಪಾರದರ್ಶಕ ಆಡಳಿತಕ್ಕೆ ಸಹಕಾರ ಅಗತ್ಯ

  ವಿಜಯವಾಣಿ ಸುದ್ದಿಜಾಲ ಕುಂದಾಣ
  ಹೋಬಳಿಯ ಜಾಲಿಗೆ ಗ್ರಾಪಂನ ತಿಂಡ್ಲು ಹಾಗೂ ಜುಟ್ಟನಹಳ್ಳಿ ಗ್ರಾಮಗಳಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸದೀಯ ಸಮಿತಿ ಸದಸ್ಯರ ತಂಡ ಸರ್ಕಾರದ ಅನುದಾನದಲ್ಲ ಕೈಗೊಂಡ ಕಾಮಗಾರಿ ಪರಿಶೀಲಿಸಿತು.
  ಜಾಲಿಗೆ ಗ್ರಾಪಂ ಅಧ್ಯಕ್ಷ ಸಿಂಗ್ರಹಳ್ಳಿ ಆನಂದ್ ಮಾತನಾಡಿ, ಗ್ರಾಪಂಗೆ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಸಂಸದೀಯ ತಂಡ ಭೇಟಿ ನೀಡಿರುವುದು ಸಂತಸದ ವಿಚಾರ ಎಂದರು. ಜುಟ್ಟನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ 127 ಮೀಟರ್ ಚರಂಡಿ, 15ನೇ ಹಣಕಾಸು, ವರ್ಗ 2 ರ ಯೋಜನೆಯಡಿ 4.5 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ, ಕಾಂಕ್ರೀಟ್ ರಸ್ತೆ ಕಾಮಗಾರಿ ಪರಿಶೀಲಿಸಿ, ಗ್ರಾಮಸ್ಥರಿಗೆ ಅಗತ್ಯ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಲು ಸಲಹೆ ನೀಡಿದ್ದಾರೆ ಎಂದರು.
  ಪಂಚಾಯಿತಿ ಸದಸ್ಯ ಜುಟ್ಟನಹಳ್ಳಿ ಬಾಲಸುಬ್ರಮಣ್ಯ, ಮಾತನಾಡಿ, ನಮ್ಮಲ್ಲಿ ಗುಣಮಟ್ಟದ ಪಾರದರ್ಶಕ ಆಡಳಿತ ನಡೆಸಲು ಸರ್ವ ಸದಸ್ಯರ ಸಹಕಾರ ಅಗತ್ಯ. ಸಹಕಾರದಿಂದ ಕಾರ್ಯನಿರ್ವಹಿಸಿದರೆ ಅಭಿವೃದ್ಧಿ ಕೆಲಸಗಳು ಉತ್ತಮವಾಗಿ ಸಂಪೂರ್ಣಗೊಳ್ಳಲು ಸಾಧ್ಯವಾಗತ್ತದೆ ಎಂದರು.
  ಜಾಲಿಗೆ ಗ್ರಾಪಂ ಉಪಾಧ್ಯಕ್ಷೆ ಭವ್ಯಾಪ್ರಶಾಂತ್, ಸದಸ್ಯರಾದ ಅಪ್ಪಯ್ಯ, ಮಹೇಶ್‌ಬಾಬು, ಸೌಮ್ಯಬಾಬು, ಪದ್ಮಾ ಮುನೇಗೌಡ, ಲಕ್ಷ್ಮಮ್ಮ, ಪಿಡಿಒ ಪ್ರಕಾಶ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts