ಉದ್ಯಮಿಗೆ ವಂಚನೆ, ಏಳು ಮಂದಿ ಸೆರೆ

blank

ಬೆಂಗಳೂರು: ಆಂಟಿಕ್ ಕಾಪರ್ ಬೌಲ್ ಮಾರಾಟದಿಂದ ಬಂದ 15 ಲಕ್ಷ ಕೋಟಿ ರೂ. ಆರ್‌ಬಿಐನಲ್ಲಿದೆ. ತೆರಿಗೆ ಪಾವತಿಸಿ ಬಿಡಿಸಿಕೊಳ್ಳಬೇಕೆಂದು ಉದ್ಯಮಿಯಿಂದ 37.50 ಲಕ್ಷ ರೂ. ಪಡೆದು ವಂಚಿಸಿದ್ದ ಏಳು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳಿ ಮೂಲದ ಇದಾಯತ್ ಉಲ್ಲಾ ಖಾನ್, ನಾಗರಬಾವಿಯ ಪ್ರತೀಕ್ ಗೌಡ, ಈತನ ಸ್ನೇಹಿತ ಉಮೇಶ್ ಕುಮಾರ್, ಸುರ್ಕೀತ್, ಮತ್ತು ತಮಿಳುನಾಡಿನ ಜಾಕೀರ್ ಬಂಧಿತರು. ಯವನಿಕಾ ಮತ್ತು ಬಿಂದು ತಲೆಮರೆಸಿಕೊಂಡಿದ್ದಾರೆ. ಈ ಆರೋಪಿಗಳಿಂದ 2 ಕಾರು, 5 ಮೊಬೈಲ್, 2 ನಕಲಿ ಆರ್‌ಬಿಐ ೈಲ್ ಮತ್ತು 1 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿ ಮೂಲದ ಉದ್ಯಮಿ ಪ್ರವೀಣ್‌ಕುಮಾರ್ ಹೂಗಾರ್ ಎಂಬುವರಿಗೆ ವಂಚನೆ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಶೇಷಾದ್ರಿಪುರದಲ್ಲಿ ಮಯಾಕ್ ಕನ್‌ಸ್ಟ್ರಕ್ಷನ್ ಆ್ಯಂಪ್ ಸಪ್ಲೈಯರ್ ಎಂಬ ಕಚೇರಿ ಹೊಂದಿದ್ದ ದೂರುದಾರ ಪ್ರವೀಣ್‌ಗೆ ನಾಗರಾಜು ಎಂಬಾತ ಸ್ನೇಹಿತನಿದ್ದ. ಈತನ ಮೂಲಕ ಸುಕೀರ್ತಿ ಮತ್ತು ಇದಾಯತ್ ಉಲ್ಲಾ ಎಂಬುವರು ಪ್ರವೀಣ್‌ಗೆ ಪರಿಚಯವಾಗಿದೆ. ಈ ಇಬ್ಬರು ಸಹ ವರ್ಲ್ಡ್ ಕಸ್ ಈವೆಂಟ್ಸ್ ಆ್ಯಂಡ್ ಎಂಟರ್‌ಟ್ಮೆಂಟ್ ಕಂಪನಿ ಹೊಂದಿದ್ದರು. ಈ ವೇಳೆ ಪ್ರವೀಣ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟರಲ್ಲಿ ಇರುವ ವಿಷಯ ತಿಳಿದ ಆರೋಪಿಗಳು, ಕೊಲ್ಕತ್ತಾ ಬ್ಯಾಂಕ್‌ನಲ್ಲಿ 5 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿದ್ದರು. ಅದಕ್ಕಾಗಿ 25 ಲಕ್ಷ ರೂ. ಖರ್ಚು ಆಗಲಿದೆ ಎಂದು ಹೇಳಿ ಹಂತ ಹಂತವಾಗಿ 17.50 ಲಕ್ಷ ರೂ. ಸುಲಿಗೆ ಮಾಡಿದ್ದರು.
ಇದಾದ ಮೇಲೆ ಸಾಲ ಮಂಜೂರು ಆಗುವುದು ತಡವಾಗಲಿದೆ. ಆದರಿಂದ ನಿನ್ನ ಸಾಲ ತೀರಿಸಲು ಮತ್ತೊಂದು ಮಾರ್ಗವಿದೆ. ಅಮೆರಿಕಾದಲ್ಲಿ ಆಟಿಂಕ್ ಕಾಪರ್ ಬೌಲ್ ಮಾರಾಟದಿಂದ ಯವನಿಕಾ ಎಂಬಾಕೆಗೆ 15 ಲಕ್ಷ ಕೋಟಿ ರೂ. ಹಣ ಲಭಿಸಿದೆ.

ಆದರೆ, ಅದು ಕೊಲ್ಕತ್ತಾದಲ್ಲಿ ಇರುವ ಆರ್‌ಬಿಐ ಪ್ರಾದೇಶಿಕ ಕಚೇರಿಯಲ್ಲಿ 15 ಲಕ್ಷ ಕೋಟಿ ರೂ. ಫ್ರೀಜ್ ಆಗಿದೆ. ಅದನ್ನು ಬಿಡಿಸಿಕೊಳ್ಳಲು 20 ಲಕ್ಷ ರೂ. ತೆರಿಗೆ ಪಾವತಿ ಮಾಡಬೇಕಿದೆ. ತಕ್ಷಣ ನೀಡಿದರೆ ದುಪ್ಪಟ್ಟು ಹಣ ವಾಪಸ್ ಕೊಡುವುದಾಗಿ ಆಮಿಷವೊಡ್ಡಿದ್ದರು.
ಅದನ್ನು ನಂಬಿದ ಪ್ರವೀಣ್‌ಕುಮಾರ್, 20 ಲಕ್ಷ ರೂ. ಅನ್ನು ಆರೋಪಿಗಳಿಗೆ ನೀಡಿದ್ದ. ಹಣ ಬಂದ ಕೂಡಲೇ ಇದಾಯಿತ್ ಉಲ್ಲಾ ಖಾನ್, ಪ್ರತೀಕ್‌ಗೌಡ ಸೇರಿಕೊಂಡು ಪ್ರವೀಣ್‌ನನ್ನು ಕೊಲ್ಕತ್ತಾದಲ್ಲಿ ಇರುವ ಆರ್‌ಬಿಐ ಕಚೇರಿ ಬಳಿಗೆ ಕರೆದುಕೊಂಡು ಹೋಗಿದ್ದರು. ಕಚೇರಿ ಹೊರಗೆ ಪ್ರವೀಣ್‌ನ್ನು ನಿಲ್ಲಿಸಿ ಒಳಗೆ ಹೋಗಿದ್ದ ಇದಾಯಿತ್ ಉಲ್ಲಾ ಖಾನ್ ಮತ್ತು ಪ್ರತೀಕ್ ಗೌಡ ಒಳಗಿಂದ ಎರಡು ದೊಡ್ಡ ೈಲ್‌ಗಳನ್ನು ತಂದು ತೋರಿಸಿದ್ದರು.

ಅಮೆರಿಕಾ ಕಂಪನಿಯಿಂದ ಹಣ ಬಂದಿರುವಂತೆ ಮತ್ತು ಬ್ಯಾಂಕ್‌ನಲ್ಲಿ ಹಣ ಫ್ರೀಜ್ ಆಗಿರುವಂತೆ ನಕಲಿ ದಾಖಲೆ ಪತ್ರಗಳನ್ನು ತೋರಿಸಿ ವಾಪಸ್ ಕರೆತಂದಿದ್ದರು. ಎಷ್ಟು ದಿನವಾದರೂ ಹಣ ವಾಪಸ್ ಕೊಟ್ಟಿರಲಿಲ್ಲ. ಕೇಳಲು ಹೋದಾಗ ಪ್ರಾಣ ಬೆದರಿಕೆ ಒಡ್ಡಿದ್ದರು. ನೊಂದ ಪ್ರವೀಣ್, ಸಿಸಿಬಿಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಎಸಿಪಿ ನವೀಣ್ ಕುಲಕರ್ಣಿ ಮತ್ತು ಇನ್‌ಸ್ಪೆಕ್ಟರ್ ಕಿರಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

 

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…