More

    ಚೌಡಯ್ಯ ಪ್ರಪ್ರಥಮ ಬಂಡಾಯ ಕವಿ

    ಬೆಳಗಾವಿ: ನೇರ ನುಡಿಯ ವಚನಕಾರ ಅಂಬಿಗರ ಚೌಡಯ್ಯ ಕೇವಲ ಒಂದು ಜಾತಿ, ಸಮುದಾಯ ಅಥವಾ ಕುಲಕ್ಕೆ ಸೀಮಿತರಾದವರಲ್ಲ. ಅವರ ವಚನಗಳಲ್ಲಿ ಬದುಕಿನ ಸೂತ್ರಗಳಿದ್ದು, ಅವುಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಎಂ.ವೈ. ಭಜಂತ್ರಿ ಸಲಹೆ ನೀಡಿದ್ದಾರೆ.

    ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

    ಅಂಬಿಗರ ಚೌಡಯ್ಯ ಅವರು ತಮ್ಮ ವಚನಗಳ ಮೂಲಕ ಸಮಾನತೆ ಹಾಗೂ ಸಹೋದರತೆ ಸಾರುವ ಕೆಲಸ ಮಾಡಿದರು. ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ನಡೆದ ದಾರಿಯಲ್ಲಿ ನಾವು ನಡೆಯೋಣ ಎಂದರು.

    12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ಜಾತಿ ತಾರತಮ್ಯದ ವಿರುದ್ಧದ ಗಟ್ಟಿ ಧ್ವನಿಯಾಗಿತ್ತು. ಅವರೆಲ್ಲ ಜಾತೀಯತೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಕನ್ನಡದ ಮೊಟ್ಟ ಮೊದಲ ಬಂಡಾಯ ಕವಿ ಅಂಬಿಗರ ಚೌಡಯ್ಯ ಎಂದು ತಿಳಿಸಿದರು.

    ಸಮುದಾಯದ ಮುಖಂಡ ಬಸವರಾಜ ಸುಣಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬಿ.ಸುರೇಖಾ, ಯಲ್ಲಪ್ಪ ಹುದಲಿ, ಜಿ.ಜಿ.ತಳವಾರ, ಎಸ್.ಕೆ.ಗಸ್ತಿ ಇತರರು ಇದ್ದರು.

    ಭವ್ಯ ಮೆರವಣಿಗೆ: ಅದಕ್ಕೂ ಮುನ್ನ ಬೆಳಗಾವಿ ನಗರದ ಪ್ರಮುಖ ಬೀದಿಗಳಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಶಾಸಕ ಅನಿಲ ಬೆನಕೆ ಅವರು ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಮೆರವಣಿಗೆಗೆ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts