ಗ್ರಾಹಕ ಅಭಿವೃದ್ಧಿ, ಸ್ವಾವಲಂಬನೆಗೆ ಸಹಕಾರ : ರಾಮಚಂದ್ರ ಬಿ.

charodi

ಬೈಂದೂರು: ಗ್ರಾಹಕರ ಅಭಿವೃದ್ಧಿಯೇ ನಮ್ಮ ಧ್ಯೇಯ. ಸೇವೆಯೇ ನಮ್ಮ ಮುಖ್ಯ ಧರ್ಮ. ಯಾವುದೇ ಜಾತೀಯತೆ, ರಾಜಕೀಯ ಇಲ್ಲದೆ ಅಭಿವೃದ್ಧಿ ಹಾಗೂ ಸ್ವಾವಲಂಬನೆಗಾಗಿ ನಮ್ಮ ಗ್ರಾಹಕರಿಗೆ ಸಹಾಯ, ಸಹಕಾರ ನೀಡಲಾಗುತ್ತಿದೆ ಎಂದು ಚಾರೋಡಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಮಚಂದ್ರ ಬಿ.ಶಿರೂರಕರ್ ಹೇಳಿದರು. ಶಿರೂರಿನ ಸಂಘದ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಚಾರೋಡಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಥಮ ಸಂಸ್ಥಾಪನಾ ದಿನ (ವಾರ್ಷಿಕೋತ್ಸವ) ಉದ್ಘಾಟಿಸಿ ಮಾತನಾಡಿದರು.

ನಮ್ಮ ಸೊಸೈಟಿ ಗ್ರಾಹಕರ ಪ್ರೋತ್ಸಾಹದೊಂದಿಗೆ ಉತ್ತಮವಾಗಿ ನಡೆಯುತ್ತಿದ್ದು, ಈಗಾಗಲೇ ನಮ್ಮ ಕೆಲವು (ಸಾಗರ, ಶಿರಸಿ ಮತ್ತು ಹೊನ್ನಾವರ) ಶಾಖೆ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಶಾಖೆ ಮಾಡುವಲ್ಲಿ ಗ್ರಾಹಕರು ಮತ್ತು ಸಮುದಾಯದವರು ಸಹಕಾರ ನೀಡಬೇಕು ಎಂದರು.
ನಿರ್ದೇಶಕರಾದ ನಾರಾಯಣ ಡಿ.ಆಚಾರ್ ಶಿರಸಿ, ವಿನಯ್ ಆರ್.ಮೇಸ್ತ ಶಿರೂರು, ಪ್ರದೀಪ್ ಬಾಬುರಾವ್ ಮೇಸ್ತ ಹೊನ್ನಾವರ, ಹರೀಶ್ ಜಿ.ಮೇಸ್ತ ಗುಜ್ಜಾಡಿ, ಸುಜಾತಾ ಯೋಗೀಶ್ ಮೇಸ್ತ ಹೊನ್ನಾವರ, ಚಂಪಾ ಆರ್.ಶಿರೂರಕರ್ ಉಪಸ್ಥಿತರಿದ್ದರು.

ಸೊಸೈಟಿ ಉಪಾಧ್ಯಕ್ಷ ಕೃಷ್ಣಮೂರ್ತಿ ವಿ.ಆಚಾರ್ ಸಾಗರ ಪ್ರಾಸ್ತಾವಿಸಿದರು. ಕಾರ್ಯನಿರ್ವಹಣಾಧಿಕಾರಿ. ನಿತೀಶ್ ಎಸ್.ದೇವಾಡಿಗ ಸ್ವಾಗತಿಸಿ. ಅಣ್ಣಪ್ಪ ವಿ.ಮೇಸ್ತ ಪ್ರಾರ್ಥಿಸಿದರು. ರಾಮನಾಥ ಮೇಸ್ತ ಶಿರೂರು ನಿರೂಪಿಸಿ, ನಿರ್ದೇಶಕ ಉಮೇಶ ಎಲ್.ಮೇಸ್ತ ಗುಜ್ಜಾಡಿ ವಂದಿಸಿದರು. ಸೊಸೈಟಿ ಸಿಬ್ಬಂದಿ ವಿಜಯಕುಮಾರ್, ಗೌರಿ ಮತ್ತು ಅನುಷಾ ಸಹಕರಿಸಿದರು.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…