ಮದುವೆಯಾಗುತ್ತಾರಂತೆ ಈ ಇಬ್ಬರು ಪ್ರಸಿದ್ಧ ನಟಿಯರು.. ಒಬ್ರು ಪ್ರಪೋಸ್​ ಮಾಡಿದ್ರು, ಮತ್ತೊಬ್ರು ಒಕೆ ಅಂದ್ರು…

ಚೆನ್ನೈ: ಒಬ್ಬಳು ತೆಲುಗು, ತಮಿಳು, ಕನ್ನಡ, ಹಿಂದಿ ಹೀಗೆ ಬಹುಭಾಷಾ ಚಿತ್ರಗಳಲ್ಲಿ ನಟಿಸಿರುವ ಪ್ರಸಿದ್ಧ ನಟಿ ಮತ್ತೊಬ್ಬಳು ತೆಲುಗು ಸಿನಿಮಾರಂಗದಲ್ಲಿ ನಟನೆ, ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ನಟಿ. ಈಗ ಈ ಇಬ್ಬರೂ ಚೆಲುವೆಯರು ಮದುವೆ ಮಾಡಿಕೊಳ್ಳುತ್ತಾರಂತೆ !

ನಾವಿಲ್ಲಿ ಹೇಳುತ್ತಿರುವುದು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವ ತ್ರಿಶಾ ಕೃಷ್ಣನ್​ ಹಾಗೂ ನಟಿ, ನಿರ್ಮಾಪಕಿ ಚಾರ್ಮಿ ಕೌರ್​ ಬಗ್ಗೆ . ಇವರಿಬ್ಬರೂ ತಮ್ಮ ಟ್ವಿಟರ್​ನಲ್ಲಿ ಮದುವೆ ವಿಚಾರವನ್ನು ಪ್ರಸ್ತಾಪಿಸಿಕೊಂಡಿದ್ದಾರೆ. ಅಲ್ಲದೆ ಚಾರ್ಮಿ ಕೌರ್​ ನೇರವಾಗಿ ತ್ರಿಶಾಗೆ ಪ್ರಪೋಸ್​ ಮಾಡಿದ್ದಾರೆ. ಅದಕ್ಕೆ ತ್ರಿಶಾ ಒಕೆ ಎಂದಿದ್ದಾರೆ.

ಮೇ 4ರಂದು ತ್ರಿಶಾ ಅವರ 36 ನೇ ವರ್ಷದ ಜನ್ಮದಿನಾಚರಣೆಯಿತ್ತು. ಅವರ ಅಭಿಮಾನಿಗಳು, ಸಹನಟ, ನಟಿಯರು ಸೇರಿ ಅನೇಕ ಜನ ಸಾಮಾಜಿಕ ಜಾಲತಾಣಗಳಲ್ಲಿ ಬರ್ತ್​ಡೇ ವಿಶ್ ಮಾಡಿದ್ದಾರೆ. ಅಲ್ಲದೆ ಹಲವು ಗಣ್ಯರೂ ಸಹ ತಾವು ತ್ರಿಶಾ ಅವರೊಂದಿಗೆ ಇದ್ದ ಫೋಟೋಗಳನ್ನು ಶೇರ್​ ಮಾಡಿಕೊಂಡು ಹ್ಯಾಪಿ ಬರ್ತ್​ ಡೇ ತ್ರಿಶಾ ಎಂದು ಹಾರೈಸಿದ್ದಾರೆ.

ಹಾಗೇ ಚಾರ್ಮಿ ಕೌರ್​ ಕೂಡ ಒಬ್ಬರು. ಆದರೆ ಈಕೆ ಜನ್ಮದಿನಕ್ಕೆ ಶುಭಕೋರುವ ಜತೆ ನೇರವಾಗಿ ನಾವಿಬ್ಬರೂ ಮದುವೆಯಾಗೋಣವೇ ಎಂದಿದ್ದಾರೆ.

ಇವರಿಬ್ಬರೂ ಬಹುಕಾಲದ ಗೆಳತಿಯರು. ತ್ರಿಶಾ ಅವರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ ಚಾರ್ಮಿ, ಬೇಬಿ, ಐ ಲವ್​ ಯೂ. ಇಂದು ಮತ್ತೆ ಮುಂದೆಂದಿಗೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ನನ್ನ ಮೊಣಕಾಲ ಮೇಲೆ ಕುಳಿತು ಕೇಳುತ್ತಿದ್ದೇನೆ, ಇನ್ನಾದರೂ ನನ್ನ ಮದುವೆಯಾಗಲು ಒಪ್ಪಿಕೊಳ್ಳುತ್ತೀಯಾ? ಈಗ ಕಾನೂನಿನಲ್ಲೂ ಅವಕಾಶ ಇದೆಯಲ್ಲ ಎಂದು ಹೇಳಿ, ನಂತರ ಬರ್ತ್​ ಡೇ ವಿಶ್​ ಮಾಡಿದ್ದಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ತ್ರಿಶಾ, ನಾನು ಈಗಾಗಲೇ ನಿನ್ನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಇವರಿಬ್ಬರ ಈ ಟ್ವಿಟರ್​ ಸಂಭಾಷಣೆ ಹಲವರ ಹುಬ್ಬೇರುವಂತೆ ಮಾಡಿದೆ. ಅವರಿಬ್ಬರೂ ಪರಸ್ಪರ ಕಿಚಾಯಿಸಿಕೊಳ್ಳುತ್ತಿದ್ದಾರೋ, ನಿಜವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಚಾರ್ಮಿ ಕೌರ್​ ಹಾಗೂ ತ್ರಿಶಾ ಕೃಷ್ಣನ್​ ಇಬ್ಬರೂ ಇನ್ನೂ ಸಿಂಗಲ್​ ಆಗಿಯೇ ಇದ್ದಾರೆ. 2015ರ ಜನವರಿಯಲ್ಲಿ ತ್ರಿಶಾ ಚೆನ್ನೈ ಮೂಲದ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದೇ ವರ್ಷ ಮೇ ನಲ್ಲಿ ಆ ಸಂಬಂಧ ಮುರಿದು ಬಿದ್ದಿತ್ತು. 2018ರಲ್ಲಿ ಕೂಡ ತ್ರಿಶಾ ಮದುವೆ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ನಂತರ ತಿಳಿಸುತ್ತೇವೆ ಎಂದು ತ್ರಿಶಾ ತಾಯಿ ಹೇಳಿದ್ದರು. ಚಾರ್ಮಿ ಕೂಡ ಸದ್ಯ ನಟನೆಯಿಂದ ದೂರವುಳಿದಿದ್ದಾರೆ.

ಆದರೆ ಈ ಟ್ವೀಟ್​ಗಳಿಂದ ನಟಿಯರಿಬ್ಬರ ಫಾಲೋವರ್ಸ್​ ಕೆಲವರು ಆಶ್ಚರ್ಯಕ್ಕೆ ಒಳಗಾಗಿದ್ದರೆ, ಕೆಲವರು ಬೇಗ ಮದುವೆಯಾಗಿ ಎಂದು ಹಾರೈಸಿದ್ದಾರೆ.

2 Replies to “ಮದುವೆಯಾಗುತ್ತಾರಂತೆ ಈ ಇಬ್ಬರು ಪ್ರಸಿದ್ಧ ನಟಿಯರು.. ಒಬ್ರು ಪ್ರಪೋಸ್​ ಮಾಡಿದ್ರು, ಮತ್ತೊಬ್ರು ಒಕೆ ಅಂದ್ರು…”

Comments are closed.