Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಚಾರ್ಮಾಡಿ ಹೆದ್ದಾರಿ ಸಂಚಾರಕ್ಕೆ ಮುಕ್ತ

Thursday, 14.06.2018, 10:24 PM       No Comments

ಬೆಳ್ತಂಗಡಿ: ಭೂಕುಸಿತ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಿರ್ಬಂಧಕ್ಕೊಳಗಾಗಿದ್ದ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಗುರುವಾರ ರಾತ್ರಿಯಿಂದಲೇ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಶುಕ್ರವಾರದಿಂದ ಸಾಮಾನ್ಯ ಬಸ್ ಸಹಿತ ಪ್ರಯಾಣಿಕ ವಾಹನಗಳು ಸಂಚರಿಸಲಿವೆ. ಟ್ರಕ್‌ಗಳು, ಪ್ರಯಾಣಿಕೇತರ ವಾಹನಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ರಸ್ತೆ ಮೇಲೆ ಬಿದ್ದಿದ್ದ ಮಣ್ಣು-ಬಂಡೆ ಹಾಗೂ ಮರಗಳ ತೆರವು, ಅಲ್ಲಲ್ಲಿ ರಸ್ತೆ ದುರಸ್ತಿ ಮತ್ತಿತರ ತುರ್ತು ಕೆಲಸಗಳನ್ನು ಗುರುವಾರ ಸಾಯಂಕಾಲದ ಹೊತ್ತಿಗೆ ಮುಗಿಸಲಾಗಿದೆ, ಈ ಭಾಗದಲ್ಲಿ ಮಳೆಯೂ ಕಡಿಮೆಯಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದ.ಕ. ಹಾಗೂ ಚಿಕ್ಕಮಗಳೂರು ಎಸ್‌ಪಿ ರಸ್ತೆ ಪರಿಶೀಲಿಸಿದ್ದಾರೆ. ಏಳು ಜೆಸಿಬಿ ಯಂತ್ರಗಳು ರಸ್ತೆ ಮಣ್ಣು ಕಲ್ಲುಗಳ ತೆರವು ಕಾರ್ಯಾಚರಣೆಯಲ್ಲಿ ಗುರುವಾರ ತೊಡಗಿದ್ದು, ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಇತರ ಕಾರ್ಮಿಕರು ಬಿದ್ದ ಮರಗಳನ್ನು ತೆರವುಗೊಳಿಸಿದರು.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ರಸ್ತೆ ದುರಸ್ತಿ ಕಾರ್ಯದಲ್ಲಿ ಸಹಕರಿಸಿದ್ದು, ಪ್ರಯಾಣಿಕರಿಗೆ ಹೆಚ್ಚು ಅನನುಕೂಲವಾಗದಂತೆ ವ್ಯವಸ್ಥೆ ಮಾಡಿದೆ. ಈ ನಡುವೆ, ಕೆಲವು ವಾಹನಗಳು ಉಜಿರೆ ಪೊಲೀಸರಲ್ಲಿ ಸ್ಥಳೀಯ ಕಕ್ಕಿಂಜೆ, ಚಾರ್ಮಾಡಿಗೆ ಹೋಗಲಿದೆ ಎಂದು ಸುಳ್ಳು ಮಾಹಿತಿ ನೀಡಿ ಚಾರ್ಮಾಡಿ ಘಾಟಿ ಪ್ರಯಾಣಿಸಲು ಯತ್ನಿಸಿದ್ದು, ಘಾಟಿ ಮಧ್ಯದಲ್ಲಿ ಪೊಲೀಸರು ತಡೆದಿದ್ದಾರೆ.

ಮಳೆ ಬಂದರೆ ಅಪಾಯ: ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಹಲವೆಡೆ ಗುಡ್ಡಗಳು ಬಿರುಕು ಬಿಟ್ಟಿದ್ದು, ಮತ್ತೆ ಭಾರಿ ಮಳೆ ಬಂದರೆ ಮತ್ತೆ ಗುಡ್ಡ ಕುಸಿದು ಸಮಸ್ಯೆಯಾಗಬಹುದು. ಕೆಲವು ಅಪಾಯಕಾರಿ ಮರಗಳ ತೆರವು ಬಾಕಿ ಇರುವುದೂ ಸಮಸ್ಯೆ. 8ನೇ ತಿರುವಿನಲ್ಲಿ ರಸ್ತೆಯ ತಡೆಗೋಡೆ ಕುಸಿದುಬಿದ್ದಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಇಡೀ ರಸ್ತೆ ಕುಸಿಯುವ ಭೀತಿ ಇದೆ.

ಆಗುಂಬೆ ಘಾಟಿಯಲ್ಲಿ ಅಪಘಾತ ತಡೆಬೇಲಿ ಕುಸಿತ: ಶಿವಮೊಗ್ಗ- ತೀರ್ಥಹಳ್ಳಿ- ಉಡುಪಿ- ಮಂಗಳೂರು ಪ್ರಮುಖ ಸಂಪರ್ಕಕೊಂಡಿ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಎರಡು ಕಡೆ ಕ್ರಾೃಶ್ ಬ್ಯಾರಿಯರ್ (ಅಪಘಾತ ತಡೆ ಬೇಲಿ) ಕುಸಿದಿದೆ.

ಈ ಮೊದಲೇ ಕಲ್ಲಿನ ತಡೆಗೋಡೆ ಅಲ್ಲಲ್ಲಿ ಕುಸಿದಿದ್ದು, ಹೆದ್ದಾರಿ ಇಲಾಖೆ ಪರ್ಯಾಯವಾಗಿ ಕ್ರಾೃಶ್ ಬ್ಯಾರಿಯರ್ ಅಳವಡಿಸಿತ್ತು. ಈಗ ತಡೆಗೋಡೆ ಕಲ್ಲು, ಒಳ ಮಣ್ಣಿನ ಪದರ ನೀರಿನ ಸೆಳೆತಕ್ಕೆ ಜಾರುತ್ತಿದ್ದು, ಕ್ರಾೃಶ್ ಬ್ಯಾರಿಯರ್ ಕುಸಿತಕ್ಕೆ ಕಾರಣವಾಗಿದೆ. ಒಂದೆಡೆ ಮರದ ರೆಂಬೆ, ಕೊಂಬೆಗಳು ರಸ್ತೆಗೆ ಆಗಾಗ ಬೀಳುತ್ತಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಗುಡ್ಡಕ್ಕೆ ಹೊಂದಿಕೊಂಡ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಇನ್ನೂ ಬೀಳುವ ಸ್ಥಿತಿಯಲ್ಲಿವೆ. ಗಾಳಿ, ಮಳೆ, ನೀರಿನ ಹರಿವಿನ ಒರೆತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಆಗುಂಬೆ ಘಾಟಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ, ವಾಹನ ಸಂಚಾರವು ನಿಧಾನಗತಿಯಲ್ಲಿದ್ದು, ಎಚ್ಚರಿಕೆಯಿಂದ ಚಾಲನೆ ಮಾಡಬೇಕಿದೆ ಎಂದು ಉಡುಪಿ ಜಿಲ್ಲಾಡಳಿತ ಸೂಚಿಸಿದೆ.

Leave a Reply

Your email address will not be published. Required fields are marked *

Back To Top