ಚಿತ್ರದುರ್ಗ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಜಾತ್ರೆ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ರಥೋತ್ಸವದ ಅಂಗವಾಗಿ ಭಾನುವಾರ ಜರುಗಿದ ಹರಾಜು ಪ್ರಕ್ರಿಯೆಯಲ್ಲಿ ಮುಕ್ತಿ ಬಾವುಟವನ್ನು 63 ಲಕ್ಷ ರೂ.ಗೆ
ಬೆಂಗಳೂರಿನ ಉದ್ಯಮಿ ತೇಜಸ್ವಿ ಆರಾಧ್ಯ ಪಡೆದರು. ಅಸಂಖ್ಯಾತ ಭಕ್ತರು ಇದಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ಪೊಲೀಸ್ ಬಡಾವಣೆಯಲ್ಲೇ ಮನೆಗೆ ನುಗ್ಗಿ ಚಿನ್ನದ ಸರ ಕಸಿದು ಪರಾರಿ
ಚುನಾವಣಾ ವರ್ಷಗಳಲ್ಲಿ ದೊಡ್ಡ ಮೊತ್ತಕ್ಕೆ ಮುಕ್ತಿ ಬಾವುಟ ಹರಾಜಾಗುವುದು ಸಾಮಾನ್ಯ. ಆದರೆ, ಯಾವ ಎಲೆಕ್ಷನ್ ಘೋಷಣೆ ಆಗದಿದ್ದರೂ 2025ರಲ್ಲೂ ಈ ಮೊತ್ತಕ್ಕೆ ಹರಾಜಾಗಿದ್ದು, ನೆರೆದಿದ್ದ ಭಕ್ತ ಸಮೂಹದಲ್ಲಿ ಅಚ್ಚರಿ ಮೂಡಿಸಿತು. ಸರ್ಕಾರಿ ಸವಾಲ್ 1 ಕೋಟಿ ರೂ.ಗೆ ನಿಗದಿ ಪಡಿಸಲಾಯಿತು. ಪ್ರಕ್ರಿಯೆ ಆರಂಭವಾದ ನಂತರ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ 60 ಲಕ್ಷ ರೂ.ವರೆಗೂ ಕೂಗಿ ಹಿಂದೆ ಸರಿದರು. ನಾಲ್ಕೈದು ಮಂದಿ ಮುಕ್ತಿ ಬಾವುಟಕ್ಕಾಗಿ ತೀವ್ರ ಪೈಪೋಟಿ ನಡೆಸಿದರು.
ಇದನ್ನೂ ಓದಿ: ಗೋಧ್ರಾ ಹತ್ಯಾಕಾಂಡ ಬಗ್ಗೆ ಮೌನಮುರಿದ ಪ್ರಧಾನಿ ಮೋದಿ; ಪಾಡ್ಕಾಸ್ಟ್ನಲ್ಲಿ ಅಸಲಿ ಸಂಗತಿ ತೆರೆದಿಟ್ಟ PM
2018ರ ಚುನಾವಣಾ ಸಂದರ್ಭದಲ್ಲಿಯೂ ಮುಖೇಶ್ ಎಂಬುವವರು 72 ಲಕ್ಷ ರೂ.ಗೆ ಮುಕ್ತಿಬಾವುಟ ಪಡೆದಿದ್ದರು. 2019ರಲ್ಲೂ 62 ಲಕ್ಷ ರೂ.ಗೆ ಹರಾಜಾಗಿತ್ತು. 2023ರಲ್ಲಿ ಈಗಿನ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ 55 ಲಕ್ಷ ರೂ.ಗೆ, ಕಳೆದ ಬಾರಿಯೂ ಅವರೇ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು 61 ಲಕ್ಷ ರೂ.ಗೆ ಮುಕ್ತಿ ಬಾವುಟ ಪಡೆದುಕೊಂಡಿದ್ದರು.
ಹರಾಜು ನಂತರ ಚಿತ್ತ ನಕ್ಷತ್ರ ಆರಂಭವಾದ 3.45ರ ಸಮಯದಲ್ಲಿ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ದೊರೆಯಿತು. ಆಂಧ್ರ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಮಧ್ಯೆ ರಾಜಗಾಂಭೀರ್ಯದಿಂದ ತೇರು ಸಾಗಿತು.
ಗೋಧ್ರಾ ಹತ್ಯಾಕಾಂಡ ಬಗ್ಗೆ ಮೌನಮುರಿದ ಪ್ರಧಾನಿ ಮೋದಿ; ಪಾಡ್ಕಾಸ್ಟ್ನಲ್ಲಿ ಅಸಲಿ ಸಂಗತಿ ತೆರೆದಿಟ್ಟ PM