ನಾಥೂರಾಂ ಗೋಡ್ಸೆ ಮೊದಲ ಹಿಂದು ಭಯೋತ್ಪಾದಕ ಎಂದ ಕಮಲ್​ಹಾಸನ್​ ಮೇಲೆ ಚಪ್ಪಲಿ ದಾಳಿ

ಮಧುರೈ: ಮಹಾತ್ಮ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆ ಮೊದಲ ಹಿಂದು ಭಯೋತ್ಪಾದಕ ಎಂದು ಹೇಳಿದ್ದ ಬಹುಭಾಷಾ ನಟ ಹಾಗೂ ರಾಜಕಾರಣಿ ಕಮಲ್​ಹಾಸನ್​ ಭಾಷಣ ಮಾಡುತ್ತಿದ್ದ ವಾಹನದ ಮೇಲೆ ಸಾರ್ವಜನಿಕರು ಚಪ್ಪಲಿ ದಾಳಿ ಮಾಡಿದ್ದಾರೆ. ತಮಿಳುನಾಡಿನ ತಿರುಪ್ಪರಂಕುಂದರಂ ವಿಧಾನಾಸಭಾ ಕ್ಷೇತ್ರದಲ್ಲಿ ಬುಧವಾರ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ ಈ ದಾಳಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಕಮಲ್​ಹಾಸನ್​ ಅವರು ತಮ್ಮ ಪ್ರಚಾರ ವಾಹನದ ಮೇಲೆ ನಿಂತು ಭಾಷಣ ಮಾಡುತ್ತಿದ್ದರು. ಆಗ ಕೆಲ ಕಿಡಿಗೇಡಿಗಳು ಚಪ್ಪಲಿ ದಾಳಿ ಮಾಡಿದರು. ಆದರೆ, ಚಪ್ಪಲಿ ಕಮಲ್​ಹಾಸನ್​ ಅವರ ಮೇಲೆ ಬೀಳಲಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮಕ್ಕಳ್​ ನೀದಿ ಮೈಯಂ ಎಂಬ ರಾಜಕೀಯ ಪಕ್ಷ ಸ್ಥಾಪಿಸಿರುವ ಕಮಲ್​ಹಾಸನ್​ ಕೆಲದಿನಗಳ ಹಿಂದೆ ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥೂರಾಂ ಗೋಡ್ಸೆ ದೇಶದ ಮೊದಲ ಹಿಂದು ಭಯೋತ್ಪಾದಕ ಎಂದು ಹೇಳಿದ್ದರು. (ಏಜೆನ್ಸೀಸ್​)