ಚನ್ನಪ್ಪ ಜಮಖಂಡಿ ಗೆಲುವು ನಿಶ್ಚಿತ

ಬೀಳಗಿ: ಗಲಗಲಿ ಜಿಪಂ ಉಪಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಪ್ಪ ಜಮಖಂಡಿಯವರ ಗೆಲುವು ನಿಶ್ಚಿತ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

ತಾಲೂಕಿನ ಅಮಲಝುರಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮನೆಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು.

ಗಲಗಲಿ ಜಿಪಂ ವ್ಯಾಪ್ತಿಯ ತೆಗ್ಗಿ, ಬಿಸನಾಳ, ಗುಳಬಾಳ, ತೆಗ್ಗಿ ತಾಂಡಾ, ಚಿಕ್ಕ ಹಂಚಿನಾಳ, ಮಂಡಗನೂರ, ಕೋಲೂರ, ರಬಕವಿ, ಶಿವಾಪುರ, ಅಮಲಝುರಿ, ಯಡಹಳ್ಳಿ, ಗಲಗಲಿ ಸೇರಿದಂತೆ ಮತ್ತಿತರ ಗ್ರಾಮದಲ್ಲಿ ಮತದಾರು ಬಿಜೆಪಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದರು. ಜಿಪಂ ಸದಸ್ಯ ಹೂವಪ್ಪ ರಾಠೋಡ, ಸಂಗಪ್ಪ ಕಟಗೇರಿ, ಜೆ.ಡಿ. ದೇಸಾಯಿ, ಮುತ್ತು ದೇಸಾಯಿ, ಮಹಾತೇಂಶ ಕೋಲಕಾರ, ಈರಣ್ಣ ಗಿಡ್ಡಪ್ಪಗೋಳ, ಮೋಹನ ಜಾಧವ, ಆನಂದ ಇಂಗಳಗಾಂವಿ, ಹೊಳಬಸು ಬಾಳಶೆಟ್ಟಿ, ಎಸ್.ಜಿ. ಗೋಳಿಪಲ್ಲೆ, ಅಪ್ಪಯ್ಯ ಅಂಗಡಿ, ಜಿಪಂ ಮಾಜಿ ಅಧ್ಯಕ್ಷ ಬೆನ್ನಪ್ಪ ಬೀಳಗಿ, ವಿಠ್ಠಲ ಬಿರಾದಾರ, ಶಿವಪ್ಪ ಹವೇಲಿ, ಹನುಮಂತ ಮಾದರ, ಮಲ್ಲಪ್ಪ ಕೊಪ್ಪದ, ರವಿ ದೇಸಾಯಿ, ಎಂ.ಎಂ. ಶಂಭೋಜಿ, ತೆಗ್ಗಿ ಗ್ರಾಪಂ ಅಧ್ಯಕ್ಷ ಗೋವಿಂದ ರಾಠೋಡ, ತಿಪ್ಪಣ್ಣ ಸಂಜೀವಪ್ಪಗೋಳ, ಶಂಕರ ತಳವಾರ ಇದ್ದರು.

Leave a Reply

Your email address will not be published. Required fields are marked *