ಸಮಯ ಸದ್ಬಳಕೆ ಮಾಡಿಕೊಂಡ್ರೆ ಜೀವನ ಸಾರ್ಥಕ

ಚನ್ನಗಿರಿ: ಮರಳಿ ಬಾರದ ಸಂಪತ್ತಾಗಿರುವ ಸಮಯವನು ಸದ್ಬಳಕೆ ಮಾಡಿಕೊಂಡಲ್ಲಿ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಪಾಂಡೋಮಟ್ಟಿಯಲ್ಲಿ ಆಯೋಜಿಸಿದ್ದ ಸರ್ವ ಶರಣ ಶರಣೆಯರ ಸ್ಮರಣೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು. ಸಮಯ ಅಮೂಲ್ಯವಾದುದು. ಇದಕ್ಕೆ ಹೊಂದಿಕೊಂಡು ನಾವು ಬದುಕಬೇಕು ಎಂದು ಹೇಳಿದರು.

ಅಹಂಕಾರ, ಅಜ್ಞಾನ, ಅಸೂಯೆ ನಾಶವಾಗಿ ಬಸವತತ್ವದ ಅಡಿ ಉತ್ತಮ ಸಂಸ್ಕಾರ, ಶಿಸ್ತು ಕಲಿಯಬೇಕು. ಯಾರಿಗೂ ಕೆಡಕು ಬಯಸದೇ ಒಳಿತು ಮಾಡುವವನು ಮಾನವನಾಗುತ್ತಾನೆ ಎಂದು ಚೌಡಯ್ಯನವರು ತಿಳಿಸಿದ್ದಾರೆ ಎಂದರು.

ಬೆಂಗಳೂರಿನ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಚ್.ಎಸ್. ಸಿದ್ದೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆ.ಆರ್. ಷಣ್ಮುಖಪ್ಪ, ಕೆಎಸ್‌ಎಸ್‌ಎಫ್‌ಸಿ ಹಿರಿಯ ವ್ಯವಸ್ಥಾಪಕ ಎನ್. ರಂಗಪ್ಪ, ರಂಗಕಲಾವಿದ ಎಸ್.ಎನ್. ರಂಗಸ್ವಾಮಿ ಇತರರಿದ್ದರು.