ಸಿದ್ಧಗಂಗಾ ಶ್ರೀಗಳಿಗೆ ಚನ್ನಗಿರಿಯ ನಾಗೇನಹಳ್ಳೀಲಿ ನಾಗರಾಜನ ನಮನ

ಚನ್ನಗಿರಿ: ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಹಾವೊಂದು ಒಂದು ಗಂಟೆಗೂ ಹೆಚ್ಚು ಸಮಯ ಹೆಡೆ ಬಿಚ್ಚಿ ನಮನ ಸಲ್ಲಿಸುವಂತೆ ಕುಳಿತ ಘಟನೆ ಜನರ ಅಚ್ಚರಿಗೆ ಕಾರಣವಾಗಿದೆ.

ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ನಾಗೇನಹಳ್ಳಿ ಗ್ರಾಮಸ್ಥರು ಶ್ರೀ ಆಂಜನೇಯ ಮತ್ತು ನಾಗಲಿಂಗೇಶ್ವರ ದೇವಸ್ಥಾನದ ಮುಂದೆ ಮಂಗಳವಾರ ತುಮಕೂರು ಶ್ರೀ ಸಿದ್ಧಗಂಗಾ ಸ್ವಾಮೀಜಿ ಅವರ ಭಾವಚಿತ್ರ ಇರಿಸಿ ಶ್ರದ್ಧಾಂಜಲಿ ಆಚರಿಸಿ ಹೋಗಿದ್ದರು.

ಇದೇ ಭಾವಚಿತ್ರದ ಮುಂದೆ ಬುಧವಾರ ನಾಗರ ಹಾವೊಂದು ಹೆಡೆಬಿಚ್ಚಿ ಗಂಟೆಗಟ್ಟಲೇ ಆಟವಾಡುತ್ತಿದ್ದುದು ಜನರ ಕುತೂಹಲ ಕೆರಳಿಸಿತು.

ಬಹಳಷ್ಟು ಜನ ಸ್ಥಳದಲ್ಲಿದ್ದರೂ ಹಿಂದೆ ಸರಿಯದ ಹಾವು ಅದರ ಪಾಡಿಗೆ ಭಾವಚಿತ್ರದ ಎದುರು ಹೆಡೆಯಾಡಿಸುತ್ತ ಕುಳಿತಿದೆ. ಸುಮಾರು ಒಂದು ಗಂಟೆ ಬಳಿಕವಷ್ಟೇ ತೆರಳಿದೆ.