More

  ಚನ್ನಬಸವೇಶ್ವರ ಕಾಲೇಜು ವಿದ್ಯಾರ್ಥಿಗಳ ಮಿಂಚು

  ಚಿಂಚೋಳಿ: ಸುಲೇಪೇಟದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದವಿಪೂರ್ವ ಮಹಾವಿದ್ಯಾಲಯಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಚನ್ನಬಸವೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.

  ಖೋಖೋದಲ್ಲಿ ಮೇಘನಾ, ಸಾಗರ ತಂಡಗಳು ಪ್ರಥಮ, ವಾಲಿಬಾಲ್‌ನಲ್ಲಿ ಭಾಗ್ಯಶ್ರೀ ತಂಡ ಪ್ರಥಮ, ಕಾರ್ತಿಕ ತಂಡ ದ್ವಿತೀಯ ಸ್ಥಾನ ಪಡೆದಿವೆ. ಥ್ರೋಬಾಲ್‌ನಲ್ಲಿ ಇಂದ್ರಜಿತ್ (ದ್ವಿತೀಯ), ೧೦೦ ಮೀ ಓಟದಲ್ಲಿ ಇರ್ಫಾನ್ (ಪ್ರಥಮ), ಸಾಗರ (ದ್ವಿತೀಯ), ೨೦೦ ಮೀ ಓಟದಲ್ಲಿ ಸಾಗರ (ಪ್ರಥಮ), ಕಾರ್ತಿಕ (ದ್ವೀತಿಯ), ೪೦೦ ಮೀ ಓಟದಲ್ಲಿ ಸಚಿನ್ (ಪ್ರಥಮ), ೧೫೦೦ ಮೀ ಓಟದಲ್ಲಿ ಅರ್ಜುನ (ದ್ವಿತೀಯ), ೩೦೦೦ ಮೀ ಓಟದಲ್ಲಿ ಸಚಿನ್ (ಪ್ರಥಮ), ೧೦೦ ಮೀ ಓಟದಲ್ಲಿ ಪೂಜಾ (ಪ್ರಥಮ), ಮೇಘನಾ (ದ್ವೀತಿಯ), ೧೫೦೦ ಮೀ ಓಟದಲ್ಲಿ ಸುಷ್ಮಾ (ಪ್ರಥಮ) ಉತ್ತಮ ಪ್ರದರ್ಶನ ನೀಡಿದ್ದಾರೆ.

  ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಆಡಳಿತ ಅಧಿಕಾರಿ ನಾಗರಾಜ ಕಲಬುರಗಿ, ಪ್ರಾಂಶುಪಾಲರಾದ ಬಸವರಾಜ ಪರಶೆಟ್ಟಿ, ಅಮರ ಪತ್ತಾರ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts