ಚನ್ನಮ್ಮರನ್ನು ರಾಜ್ಯಸಭೆ ಸದಸ್ಯರನ್ನಾಗಿಸಬೇಕು: ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಿಎಂ ಜಗದೀಶ್​ ಶೆಟ್ಟರ್​

ಧಾರವಾಡ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಕುಟುಂಬ ಸದಸ್ಯರೆಲ್ಲರೂ ರಾಜಕೀಯದಲ್ಲಿದ್ದಾರೆ. ಚನ್ನಮ್ಮರನ್ನು ರಾಜ್ಯಸಭಾ ಸದಸ್ಯರನ್ನಾಗಿಸಬೇಕು ಎಂದು ನಾನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟೆರ್​ ಸಮರ್ಥನೆ ನೀಡಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರ ಕುಟುಂಬದ ಸದಸ್ಯರು, ನೆಂಟರು ಎಲ್ಲರೂ ರಾಜಕೀಯದಲ್ಲಿದ್ದಾರೆ. ಇದು ಇನ್ನೂ ಸಂತುಷ್ಟ ಕುಟುಂಬ ಆಗಬೇಕಾದರೆ ಚನ್ನಮ್ಮರನ್ನು ರಾಜ್ಯಸಭಾ ಸದಸ್ಯರನ್ನಾಗಿಸಬೇಕು ಎಂದು ನಾನು ಸಲಹೆ ಕೊಟ್ಟಿದ್ದೆ. ನನ್ನ ಹೇಳಿಕೆ ನೋವಾಗಿದೆ ಎಂದು ಎಚ್​ಡಿಕೆ ಹೇಳಿದ್ದು ತಾನು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎಂದು ಶೆಟ್ಟರ್ ತಿಳಿಸಿದ್ದಾರೆ.

ಸಿಎಂ ಎಚ್​ಡಿಕೆ ಕುರಿತು ಮಾತನಾಡಿರುವ ಅವರು, ನೀವು ಸಿಎಂ, ನಿಮ್ಮ ಬ್ರದರ್ ಸಚಿವರಾಗಿರುವಾಗ ಮಕ್ಕಳನ್ನು ಎಂಪಿ ಮಾಡೋಕೆ‌ ಹೊರಟಿದ್ದೀರಾ?ಹೀಗಿರುವಾಗ ಚನ್ನಮ್ಮಾಜಿಯವರನ್ನು ರಾಜ್ಯಸಭೆ ಸದಸ್ಯರನ್ನು ಮಾಡುವಲ್ಲಿ ತಪ್ಪೇನಿದೆ ಎಂದಿರುವ ಅವರು, ಅದನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡ. ನೋವು ಆಗುವ ರೀತಿಯಲ್ಲಿ ನಾನು ಹೇಳಿಲ್ಲ. ಒಳ್ಳೆಯ ರೀತಿಯಲ್ಲಿ ತಗೊಳ್ಳಿ. ನಿಮ್ಮನ್ನು ಸಾಕಿ ಸಲುಹಿದ ಅವರು ಕೂಡ ರಾಜ್ಯಸಭಾ ಸದಸ್ಯರಾಗಲಿ ಎಂದು ಹೇಳಿದ್ದೇನೆ ಎಂದರು.(ದಿಗ್ವಿಜಯ ನ್ಯೂಸ್​)