More

  ಉತ್ತಮ ಆರೋಗ್ಯಕ್ಕಾಗಿ ಆಹಾರ ಪದ್ಧತಿ ಬದಲಿಸಿಕೊಳ್ಳಿ

  ಹರಪನಹಳ್ಳಿ: ಇಂದಿನ ಆಹಾರ ಶೈಲಿ ಬದಲಾಗಿರುವುದರಿಂದ ಅತಿ ಚಿಕ್ಕ ವಯಸ್ಸಿಗೆ ಆರೋಗ್ಯ ಹಾಳಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶೆ ಎಂ.ಭಾರತಿ ಹೇಳಿದರು.


  ಪಟ್ಟಣದ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕಾಂಶ ಆಹಾರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


  ಪ್ರಸಕ್ತ ವರ್ಷದಲ್ಲಿ ಆರೋಗ್ಯಕರ ಆಹಾರ ಕೈಗೆಟುಕುವಂತಿದೆ ಎನ್ನುವ ಉದ್ದೇಶದೊಂದಿಗೆ ರಾಷ್ಟ್ರೀಯ ಪೌಷ್ಠಿಕಾಂಶ ಆಹಾರ ದಿನ ಆಚರಿಸುತ್ತಿದ್ದೇವೆ. ಸುತ್ತಮುತ್ತಲಿನ ನೈಸರ್ಗಿಕ ಔಷಧಿ ಬಳಸದೆ, ಇಂಗ್ಲೀಷ್ ಔಷಧಿಯನ್ನು ಬಳಸುವ ಮೂಲಕ ಇತರೆ ಸೈಡ್ ಎಫೆಕ್ಟ್ಟ್ ಅನುಭವಿಸುತ್ತಿದ್ದೇವೆ. ನಿತ್ಯ ವ್ಯಾಯಾಮ, ಯೋಗ, ಉತ್ತಮ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕು ಎಂದರು.


  ವಕೀಲರ ಸಂಘದ ಅದ್ಯಕ್ಷ ಎಂ.ಅಜ್ಜಣ್ಣ ಮಾತನಾಡಿ,ಇಂದಿನ ದಿನಗಳಲ್ಲಿ ಸರಿಯಾದ ಆಹಾರ ಕ್ರಮ ಇಲ್ಲದೆ ಅನಾರೋಗ್ಯ ಹೆಚ್ಚಾಗುತ್ತದೆ. ಆಹಾರ ಪದ್ಧತಿ ಬದಲಾಯಿಸಿಕೊಂಡರೆ ಮಾತ್ರ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

  ಇದನ್ನೂ ಓದಿ:

  ಮೊಳಕೆ ಕಾಳು, ಸೊಪ್ಪು, ತರಕಾರಿ, ಹಣ್ಣುಗಳು, ವಿವಿಧ ರೀತಿಯ ಧಾನ್ಯಗಳು ಒಳಗೊಂಡು ಪೌಷ್ಟಿಕಾಂಶವುಳ್ಳ ಆಹಾರದ ಬಗ್ಗೆ ವಸ್ತುಪ್ರದರ್ಶನ ಏರ್ಪಡಿಸಲಾಯಿತು. ಅಪಾರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶಗೌಡ, ಹಿರಿಯ ವಕೀಲರಾದ ಜಗದೀಶಗೌಡ, ವೀರುಪಾಕ್ಷಪ್ಪ, ಕೆ.ಜಗದಪ್ಪ, ಮೀನಾಕ್ಷಿ, ನಿರ್ಮಲ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts