ಚಂದ್ರಯಾನ- 2 ಡಿಸೆಂಬರ್​ಕ್ಕೆ ಮುಂದೂಡಿಕೆ​: ಇಸ್ರೋ ಮಾಹಿತಿ

ನವದೆಹಲಿ: ಅಕ್ಟೋಬರ್​ನಲ್ಲಿ ನಿಗದಿಯಾಗಿದ್ದ ಭಾರತದ ಮಹಾತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ನ್ನು ಡಿಸೆಂಬರ್​ಗೆ ಮುಂದೂಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರಯಾನ-2 ಈ ಹಿಂದೆ ಏಪ್ರಿಲ್​ನಲ್ಲಿ ಲಾಂಚ್​ ಮಾಡಬೇಕು ಎಂದು ನಿಗದಿಯಾಗಿತ್ತು. ನಂತರ ಅಕ್ಟೋಬರ್​ಗೆ ಮುಂದೂಡಲ್ಪಟ್ಟಿತ್ತು. ಈಗ ಮತ್ತೆ ಡಿಸೆಂಬರ್​ನಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಇಸ್ರೇಲ್​ ಕೂಡ ಡಿಸೆಂಬರ್​ನಲ್ಲೇ ಚಂದ್ರಯಾನ ಪ್ರಾರಂಭಿಸಲಿದೆ. ಈ ಮೂಲಕ ಚಂದ್ರನ ಮೇಲೆ ನಾಲ್ಕನೇ ಸ್ಥಾನದಲ್ಲಿ ನೆಲೆ ನಿಲ್ಲಲು ಅವಿವ್​ ಮತ್ತು ದೆಹಲಿಯ ನಡುವೆ ಸ್ಪರ್ಧೆ ಏರ್ಪಟ್ಟಂತಾಗಿರುತ್ತದೆ. ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಗಗನ ನೌಕೆ ಸ್ಥಾಪಿಸಿದ ಯುಎಸ್​, ರಷ್ಯಾ, ಚೀನಾ ಕ್ರಮವಾಗಿ ಮೂರು ಸ್ಥಾನವನ್ನು ಪಡೆದಿದ್ದಾರೆ.

2008ರಲ್ಲಿ ನಡೆಸಲಾದ ಚಂದ್ರಯಾನ-1 ಕ್ಕಿಂತ ಈ ಬಾರಿಯ ಚಂದ್ರಯಾನ-2 ತುಂಬ ಮಹತ್ವದ್ದಾಗಿದೆ. ಇದು ಕಕ್ಷಾಗಾಮಿ, ರೋವರ್​ ಹಾಗೂ ಗ್ರಹನೌಕೆಯನ್ನು ಒಳಗೊಂಡಿದ್ದು ಚಂದ್ರನ ಮೇಲ್ಮೈ ಅಧ್ಯಯನ ನಡೆಸುವಂಥದ್ದಾಗಿದೆ. ಇದು ಭಾರತ ಬಾಹ್ಯಾಕಾಶ ಯೋಜನೆಗಳಲ್ಲೇ ಬಹು ಸವಾಲಿನದ್ದಾಗಿದೆ.