ಹಾಲಿವುಡ್ ಸಿನಿಮಾಗಿಂತ ಅಗ್ಗ ಚಂದ್ರಯಾನ

ನವದೆಹಲಿ: ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಒಟ್ಟಾರೆ ವೆಚ್ಚ ಹಾಲಿವುಡ್ ಸಿನಿಮಾ ವೆಚ್ಚಕ್ಕಿಂತಲೂ ಕಡಿಮೆ!

ಚಂದ್ರಯಾನ-2ಗೆ ಒಟ್ಟು 978 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಇದರಲ್ಲಿ -ಠಿ;603 ಕೋಟಿಯನ್ನು ಆರ್ಬಿಟರ್, ಲ್ಯಾಂಡರ್, ರೋವರ್, ನ್ಯಾವಿಗೇಷನ್ ಮತ್ತು ಗ್ರೌಂಡ್ ಸಪೋರ್ಟ್ ನೆಟ್​ವರ್ಕ್ಗಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಉಳಿದ 375 ಕೋಟಿ ರೂ. ಗಗನನೌಕೆಯನ್ನು ಹೊತ್ತೊಯ್ಯಲಿರುವ ರಾಕೆಟ್ ಜಿಎಸ್​ಎಲ್​ವಿಗೆ ಬಳಸಿಕೊಳ್ಳಲಾಗಿದೆ. ಗಗನನೌಕೆಗಾಗಿ ಬಳಸಿರುವ 603 ಕೋಟಿ ರೂ.ಗಳಲ್ಲಿ ಶೇ. 60ನ್ನು ಇದಕ್ಕಾಗಿ ಕಾರ್ಯನಿರ್ವಹಿ ಸಿದ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ವೆಚ್ಚ ಮಾಡಲಾಗಿದೆ. ಚಂದ್ರಯಾನ-2ಗೆ 500 ವಿವಿಗಳು ಮತ್ತು 120 ಕಂಪನಿಗಳು ಕಾರ್ಯನಿರ್ವಹಿಸಿವೆ. ಹಾಲಿವುಡ್​ನ ಕೆಲ ಚಿತ್ರಗಳ ಬಜೆಟ್​ಗೆ

ಹೋಲಿಕೆ ಮಾಡುವುದಾರೆ ಚಂದ್ರಯಾನ-2ನ ವೆಚ್ಚ ತೀರಾ ಕಡಿಮೆ. ಕ್ರಿಸ್ಟೋಫರ್ ನೊಲನ್​ರ ವಿಜ್ಞಾನ ಆಧರಿತ ಚಿತ್ರ ಇಂಟರ್​ಸ್ಟೆಲ್ಲರ್​ನ್ನು 1,062 ಕೋಟಿ ರೂ.ಗಳಲ್ಲಿ ನಿರ್ವಿುಸಲಾಗಿತ್ತು. ಅವೆಂಜರ್: ಎಂಡ್​ಗೇಮ್ ಸಿನಿಮಾಕ್ಕೆ 2,433 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಚಂದ್ರಯಾನ-2 ಬಜೆಟ್ ಅದರ ಅರ್ಧವೂ ಇಲ್ಲ.

  • ಜಿಎಸ್​ಎಲ್​ವಿ ಎಂಕೆ-3: ಚಂದ್ರಯಾನ 2 ಗಗನನೌಕೆಯನ್ನು ಹೊತ್ತೊಯ್ಯಲಿರುವ ರಾಕೆಟ್
  • ಯೋಜನೆ ಯಶಸ್ವಿಯಾದರೆ ಚಂದ್ರನಲ್ಲಿ ಗಗನನೌಕೆ ಇಳಿಸಿದ 4ನೇ ರಾಷ್ಟ್ರವೆಂಬ ಹೆಗ್ಗಳಿಕೆ
  • ಚಂದ್ರನಲ್ಲಿ ಸುರಕ್ಷಿತವಾಗಿ ಗಗನನೌಕೆ ಯನ್ನು ಇಳಿಸಲು ಹಲವು ರಾಷ್ಟ್ರಗಳು 38 ಬಾರಿ ಯತ್ನಿಸಿವೆ. ಇದರಲ್ಲಿ ಶೇ.52 ಮಾತ್ರವೇ ಯಶಸ್ವಿಯಾಗಿವೆ

ಉಡಾವಣೆ ವೀಕ್ಷಣೆಗೆ ರಾಷ್ಟ್ರಪತಿ

ಚಂದ್ರಯಾನ-2 ಉಡಾವಣೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಸಾಕ್ಷಿಯಾಗಲಿದ್ದಾರೆ. ಅವರು ಕುಟುಂಬಸ್ಥರೊಂದಿಗೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ತಿರುಪತಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ. ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೆಯನ್ನು ನೇರವಾಗಿ ನೋಡುತ್ತಿರುವ ಮೂರನೇ ರಾಷ್ಟ್ರಪತಿ ಇವರಾಗಿದ್ದಾರೆ. 2005ರಲ್ಲಿ ಎಪಿಜೆ ಅಬ್ದುಲ್ ಕಲಾಂ, 2013ರಲ್ಲಿ ಪ್ರಣಬ್ ಮುಖರ್ಜಿ ಇದಕ್ಕೆ ಸಾಕ್ಷಿಯಾಗಿದ್ದರು.

ನಾಲ್ಕನೇ ರಾಷ್ಟ್ರ

ಚಂದ್ರಯಾನ-2 ಯಶಸ್ವಿಯಾದರೆ ಚಂದ್ರನಲ್ಲಿ ಸುರಕ್ಷಿತವಾಗಿಳಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಈ ಹಿಂದೆ ಸೋವಿಯತ್ ಯೂನಿಯನ್, ಅಮೆರಿಕ, ಚೀನಾ ಚಂದ್ರನಲ್ಲಿ ಗಗನನೌಕೆಗಳನ್ನು ಇಳಿಸಿತ್ತು. ಇಸ್ರೋದ ಬಜೆಟ್​ಗಿಂತ ನಾಸಾದ ಬಜೆಟ್ 20 ಪಟ್ಟು ಹೆಚ್ಚಿದೆ.

Leave a Reply

Your email address will not be published. Required fields are marked *