ನೀರಿನ ಸುಳಿವು ನೀಡಿದ ಚಂದ್ರಯಾನ-1

ಚಂದ್ರಯಾನ-1 ಚಂದ್ರನಲ್ಲಿಳಿದ ಭಾರತದ ಮೊದಲ ಗಗನನೌಕೆ. ಒಂದು ವರ್ಷದ ಕಾಲ ವಿವಿಧ ಅಧ್ಯಯನ ನಡೆಸಿದ ರೋವರ್ ಚಂದ್ರನಲ್ಲಿ ನೀರಿನ ಕಣಗಳ ಇರುವಿಕೆಗೆ ಸಾಕ್ಷ್ಯಗಳನ್ನು ನೀಡಿತ್ತು. ಇದನ್ನು ಆಧರಿಸಿಯೇ ಇಸ್ರೋ ಹೆಚ್ಚಿನ ಅಧ್ಯಯನಕ್ಕಾಗಿ ಚಂದ್ರಯಾನ-2 ಸಿದ್ಧಪಡಿಸಿದೆ. ಚಂದ್ರಯಾನ-1 ಗಗನನೌಕೆಯನ್ನು ಭಾರತದ ಹವಾಮಾನ ಉಪಗ್ರಹ ಕಲ್ಪನ್​ಸ್ಯಾಟ್​ನ ವಿನ್ಯಾಸ ಆಧರಿಸಿ ನಿರ್ವಿುಸಲಾಗಿತ್ತು. 2008ರ ಅ. 22ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ನ.8ರಂದು ಚಂದ್ರನ ಕಕ್ಷೆ ತಲುಪಿತ್ತು. ಚಂದ್ರಯಾನ-1 ಯೋಜನೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಸಾರಿತ್ತು. ಚಂದ್ರನಲ್ಲಿರುವ ಖನಿಜಗಳು, ಇದರ ಮೇಲ್ಮೈ ರಚನೆ ಮುಂತಾದವುಗಳ ಬಗ್ಗೆ ಅಧ್ಯಯನ ನಡೆಸುವುದು ಇದರ ಉದ್ದೇಶವಾಗಿತ್ತು.

ನೀರಿನ ಕುರುಹು ಪತ್ತೆ

ಚಂದ್ರಯಾನ-1 ಕಳುಹಿಸಿದ ದಾಖಲೆ ಗಳು ಚಂದ್ರನಲ್ಲಿ ನೀರಿನ ಅಂಶಗಳು ಇರುವ ಬಗ್ಗೆ ಕುರುಹು ನೀಡಿತ್ತು. ಚಂದ್ರಯಾನ-1 ಚಂದ್ರನಲ್ಲಿ ಜಲಜನಕ- ಆಮ್ಲಜನಕ ರಾಸಾಯನಿಕ ಬಂಧ ಇರುವ ಬಗ್ಗೆ ಮಾಹಿತಿ ರವಾನಿಸಿತ್ತು. ಚಂದ್ರನ ಧ್ರುವಗಳಲ್ಲಿ ನೀರಿನ ಕಣಗಳಿರುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿತ್ತು. 1999ರಲ್ಲಿ ಕ್ಯಾಸಿನಿ ಗಗನನೌಕೆ ಶನಿ ಗ್ರಹದತ್ತ ತೆರಳುತ್ತಿದ್ದಾಗ ಚಂದ್ರ ತೀರಾ ಸಮೀಪದಲ್ಲೇ ಸಂಚರಿಸಿತ್ತು. ಈ ವೇಳೆ ಗಗನನೌಕೆ ನೀರಿರುವ ಬಗ್ಗೆ ಸಂದೇಶ ನೀಡಿತ್ತಾದರೂ ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಚಂದ್ರಯಾನ-1 ಕಳುಹಿಸಿದ ಮಾಹಿತಿ ಪ್ರಮುಖ ಸಾಕ್ಷ್ಯವಾಯಿತು. ಚಂದ್ರಯಾನ-1 ಮಾಹಿತಿ ಆಧರಿಸಿದ ಅಧ್ಯಯನ ನಡೆಸಿದ ನಾಸಾದ ಎಲ್​ಕ್ರಾಸ್ ಉಪಗ್ರಹ ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆ ಎಂದು 2009ರಲ್ಲಿ ತಿಳಿಸಿತ್ತು.

ಚಂದ್ರಯಾನ-1ನಲ್ಲಿ ಬಳಸಿದ್ದ ತಂತ್ರಜ್ಞಾನ

  • ಟೆರೇನ್ ಮ್ಯಾಪಿಂಗ್ ಕ್ಯಾಮೆರಾ, ಚಂದ್ರನ ಉತ್ತಮ ಗುಣಮಟ್ಟದ ನಕ್ಷೆ ರೂಪಿಸಲು ಸಹಾಯಕ
  • ಹೈಪರ್ ಸ್ಪೆಕ್ಟ್ರಲ್ ಇಮೇಜರ್, ಖನಿಜಗಳ ಬಗೆಗಿನ ಅಧ್ಯಯನ
  • ಲೂನಾರ್ ಲೇಸರ್ ರೇಜಿಂಗ್ ಇನ್​ಸ್ಟ್ರುಮೆಂಟ್, ಚಂದ್ರನ ಮೇಲ್ಮೈ ರಚನೆ ಬಗ್ಗೆ ಮಾಹಿತಿ
  • ಹೈ ಎನರ್ಜಿ ಎಕ್ಸ್​ರೇ ಸ್ಪೆಕೊ್ಟ್ರೕಮೀಟರ್, ಚಂದ್ರನಲ್ಲಿ ರೇಡಿಯೋಆಕ್ಟಿವ್ ಅಂಶಗಳ ಅಧ್ಯಯನ
  • ಮೂನ್ ಇಂಪ್ಯಾಕ್ಟ್ ಪ್ರೋಬ್. ನೀರಿನ ಅಧ್ಯಯನಕ್ಕಾಗಿ ದಕ್ಷಿಣ ಧ್ರುವದಲ್ಲಿ ಬೀಳುವಂತೆ ಮಾಡಲಾಗಿತ್ತು.

Leave a Reply

Your email address will not be published. Required fields are marked *