More

    ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ಗೆ ಷರತ್ತು ಬದ್ಧ ಜಾಮೀನು ನೀಡಿದ ದೆಹಲಿ ಹೆಚ್ಚವರಿ ಸೆಷನ್ಸ್ ಕೋರ್ಟ್​

    ನವದೆಹಲಿ: ಪೌರತ್ವ ಕಾಯ್ದೆ ಜಾರಿ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದ ಭೀಮ್​ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ಗೆ ದೆಹಲಿ ಹೆಚ್ಚವರಿ ಸೆಷನ್ಸ್ ಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿದೆ.

    ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಉಳಿದುಕೊಳ್ಳುವಂತಿಲ್ಲ ಎಂದು ಷರತ್ತು ವಿಧಿಸಿ ಹೆಚ್ಚುವರಿ ಸೆಷನ್ಸ್ ಕೋರ್ಟ್​ ನ್ಯಾಯಾಧೀಶೆ ಕಾಮಿನಿ ಲಾವೂ ಜಾಮೀನು ನೀಡಿದರು.

    ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಚಂದ್ರಶೇಖರ್​ ಅಜಾದ್​ ಅವರು ಜಾಮಾ ಮಸೀದಿಯಲ್ಲಿ ಜನ ಸಮೂಹವನ್ನು ಪ್ರಚೋಚಿಸಿದ ಭಾಷಣ ಮಾಡಿದ ಆರೋಪದ ಮೇಲೆ 25 ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಅಜಾದ್​ ಅವರನ್ನು ತಿಹಾರ್​ ಜೈಲಿನಲ್ಲಿ ಇಡಲಾಗಿತ್ತು. ಜಾಮೀನು ದೊರೆತ ಹಿನ್ನೆಲೆಯಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

    ಚಂದ್ರಶೇಖರ್​ ಅಜಾದ್ ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ದೆಹಲಿಯಲ್ಲಿ ಉಳಿಯುವಂತಿಲ್ಲ. ಅವರು ದೆಹಲಿಗೆ ಚಿಕಿತ್ಸೆಗೆ ಬರಬೇಕಾದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರ್ಟ್​ ಷರತ್ತು ವಿಧಿಸಿದೆ.

    ದೆಹಲಿ ಪೊಲೀಸರು ಕೋರ್ಟ್​ಗೆ ಚಂದ್ರಶೇಖರ್​ ಅಜಾದ್ ಜನರನ್ನು ಪ್ರಚೋದಿಸುವ ಭಾಷಣ ಮಾಡಿರುವುದಕ್ಕೆ ಪುರಾವೆ ಒದಗಿಸಲು ವಿಫಲರಾದರು. ಹೀಗಾಗಿ ಕೋರ್ಟ್​ ಅವರಿಗೆ ಜಾಮೀನು ನೀಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts