ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಪಡೆಯಿರಿ ಎಂದ ಆಂಧ್ರ ಸಿಎಂ ಚಂದ್ರಬಾಬು ನಾಯ್ದು

ಅಮರಾವತಿ: ನಾವಿಬ್ಬರು ನಮಗಿಬ್ಬರು ಎಂಬ ಕುಟುಂಬ ಯೋಜನೆ ಘೋಷಣೆಯಲ್ಲಿ ನನಗೆ ನಂಬಿಕೆಯಿಲ್ಲ. ನಮ್ಮ ರಾಜ್ಯದ ಜನರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಅಮರಾವತಿಯಲ್ಲಿ ಮಾತನಾಡಿ, ಕುಟುಂಬ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಬೇಕು. ಇಬ್ಬರು ಮಕ್ಕಳನ್ನು ಹೊಂದಬೇಕು. ಜನಸಂಪನ್ಮೂಲವೆಂಬುದು ದೇಶದ ಭವಿಷ್ಯಕ್ಕೆ ಅಗತ್ಯ ಆಸ್ತಿ. ನಾನು ಹೇಳುತ್ತಿದ್ದೇನೆ ನೀವೆಲ್ಲ ಎರಡು ಮಕ್ಕಳನ್ನು ಪಡೆಯಿರಿ. ಭಾರತ ಒಂದು ಕೌಟುಂಬಿಕ ವ್ಯವಸ್ಥೆ. ಅದನ್ನು ರಕ್ಷಿಸಿಕೊಂಡು ಹೋಗಬೇಕಾಗಿರುವುದು ನಮ್ಮ ಕರ್ತವ್ಯ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಕುಟುಂಬ ಯೋಜನೆಯನ್ನು ಆಂಧ್ರಪ್ರದೇಶ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದು ಇಡೀ ದೇಶ ಅಚ್ಚರಿಪಡುವಂತೆ ಮಾಡಿತ್ತು. ಇದೀಗ ಚಂದ್ರಬಾಬು ನಾಯ್ಡು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಿರಿ ಎಂದು ಹೇಳುತ್ತಿರುವುದರಿಂದ ಹಲವರು ಗೊಂದಲಕ್ಕೀಡಾಗಿದ್ದಾರೆ.