ಲಕ್ಷ್ಮೇಶ್ವರ: ಚಂಡೆ-ಮದ್ದಲೆ ವಾದ್ಯಮೇಳ ಹಾಗೂ ಆಕರ್ಷಕ ನೃತ್ಯದೊಂದಿಗೆ ಶಿಗ್ಲಿ ಗ್ರಾಮದ ವೀರಭಗತ್ ಸಿಂಗ್ ಯುವಕ ಸಂಘದಿಂದ ಪ್ರತಿಷ್ಠಾಪಿಸಿದ್ದ ಗಣೇಶನಮೂರ್ತಿ ವಿಸರ್ಜನೆ ಭಾನುವಾರ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿತು. ಬೆಳಿಗ್ಗೆ 12ಕ್ಕೆ ಲಿಂಗರಾಜ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಂಗಳೂರಿನ ಶ್ರೀ ಗುರು ಚಂಡೆವಾದ್ಯ ಕಲಾತಂಡದ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಮಹಿಳೆಯರು, ಮಕ್ಕಳು ಕಲಾತಂಡದೊಂದಿಗೆ ಹೆಜ್ಜೆಹಾಕಿದರು. ಸಂಘಟನೆಯ ಪ್ರಮುಖರಾದ ಮಂಜುನಾಥ ದೇಸಾಯಿ, ಬಾಪೂಜಿ ಹರ್ತಿ, ಇದ್ದರು.