More

  ಚಂದನ್ ಶೆಟ್ಟಿ ಕಂಠದಲ್ಲಿ ಹೊಸ `ಕೋಲು ಮಂಡೆ’ …

  ಶಿವರಾಜಕುಮಾರ್ ಅಭಿನಯದ `ಜನುಮದ ಜೋಡಿ’ ಚಿತ್ರದ ಜನಪ್ರಿಯ ಹಾಡುಗಳ ಪೈಕಿ `ಕೋಲುಮಂಡೆ ಜಂಗುಮ ದೇವರು …’ ಸಹ ಒಂದು. ಈ ಜಾನಪದ ಹಾಡನ್ನು ವಿ. ಮನೋಹರ್, ಆ ಚಿತ್ರಕ್ಕೆ ಅಳವಡಿಸಿ ಬಹಳ ಯಶಸ್ವಿಯಾಗಿದ್ದರು. ಹಾಡು ಸೂಪರ್ ಹಿಟ್ ಆಗುವುದರ ಜತೆಗೆ, ಚಿತ್ರ ಸೂಪರ್ ಹಿಟ್ ಆಗುವುದಕ್ಕೆ ಆ ಹಾಡಿನ ಕೊಡುಗೆ ಬಹಳಷ್ಟಿತ್ತು.

  ಇದನ್ನೂ ಓದಿ: ಆಕೆ ಸುಶಾಂತ್​ನ ಗೆಳತಿಯೂ ಅಲ್ಲ; ಪ್ರತಿನಿಧಿಯೂ ಅಲ್ಲ …

  ಈಗ ಇದೇ `ಕೋಲುಮಂಡೆ ಜಂಗಮ ದೇವ್ರು …’ ಹಾಡಿನ ವಿಡಿಯೋ ಆಲ್ಬಂ ಮಾಡಲಾಗಿದೆ. ಈ ಹಿಂದೆ ಈ ಹಾಡಿಗೆ ಧ್ವನಿಯಾದವರು ಗಾಯಕ ಮತ್ತು ಸಂಗೀತ ನಿರ್ದೇಶಕ ಎಲ್.ಎನ್. ಶಾಸ್ತ್ರಿ. ಈಗ ಈ ಹಾಡನ್ನು ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಹಾಡಿದ್ದಾರೆ. ಅಷ್ಟೇ ಅಲ್ಲ, ಈ ಹಾಡಿನ ಪೂರಕ ಸಂಗೀತ ಸಹ ಅವರದ್ದೇ. ಈ `ಕೋಲುಮಂಡೆ’ ಎಂಬ ವಿಡಿಯೋ ಆಲ್ಬಂ, ಆನಂದ್ ಆಡಿಯೋದಿಂದ ನಿರ್ಮಾಣವಾಗಿದ್ದು, ಗಣಪತಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ.

  ಕರೊನಾ ಹಾವಳಿಯ ಈ ಸಮಯದಲ್ಲಿ ಸಾಕಷ್ಟು ಜನರಿಗೆ ಕೆಲಸವಿಲ್ಲದಂತಾಗಿದೆ. ಈ ಸಮಯದಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಆನಂದ್ ಆಡಿಯೋದ ಶ್ಯಾಂ ಮತ್ತು ಆನಂದ್ ಅವರಿಗೆ ಈ ವಿಡಿಯೋ ಆಲ್ಬಂ ನಿರ್ಮಾಣದ ಯೋಚನೆ ಬಂತಂತೆ. ಅದರಂತೆ ಚಂದನ್ ಶೆಟ್ಟಿ ಅವರಿಂದ ಹಾಡಿಸಿ, ವಿಡಿಯೋ ಆಲ್ಬಂನಲ್ಲೂ ಅವರೇ ಕಾಡಿಸಿಕೊಂಡಿದ್ದಾರೆ. ಅವರ ಜತೆಗೆ ಶಿವು, ನಂದಿನಿ ಸೇರಿದಂತೆ ಹಲವು ಕಲಾವಿದರು ಈ `ಕೋಲುಮಂಡೆ’ ವಿಡಿಯೋ ಆಲ್ಬಂನಲ್ಲಿ ನಟಿಸಿದ್ದಾರೆ.

  ಇದನ್ನೂ ಓದಿ: ಹೊಸ `ಮಾರ್ಗ’ದಲ್ಲಿ `ಆ ದಿನಗಳು’ ಚೇತನ್!

  ಈ `ಕೋಲು ಮಂಡೆ’ ಹಾಡಿನ ಕಾನ್ಸೆಪ್ಟ್ ಮಯೂರಿ ಉಪಾಧ್ಯ ಅವರದ್ದಾದರೆ, ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನು ಹಾಡನ್ನು ಕಲರ್‍ಫುಲ್ ಆಗಿ ಚಿತ್ರೀಕರಣ ಮಾಡಿರುವುದು ಛಾಯಾಗ್ರಾಹಕ ಕಿರಣ್ ಹಂಪಾಪುರ. ಈ ಹಾಡು ಈಗಾಗಲೇ ಯೂಟ್ಯೂಬ್‍ನ ಆನಂದ್ ಆಡಿಯೋದ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದ್ದು, ಕ್ರಮೇಣ ಮೆಚ್ಚುಗೆ ಪಡೆಯುತ್ತಿದೆ.

  ಮೆಗಾಸ್ಟಾರ್ ಜನ್ಮದಿನಕ್ಕೆ ‘ಆಚಾರ್ಯ’ ಉಡುಗೊರೆ

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts