ಬೆಂಗಳೂರು ವಿವಿಯಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ವಿಚಾರ: ಸೂಕ್ತ ಪರಿಹಾರ ಸೂಚಿಸಿದ ಕುಲಪತಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಆವರಣದಲ್ಲಿ ಬುದ್ಧನ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕುಲಪತಿ ವೇಣುಗೋಪಾಲ್​​​​​​​ ಅವರು ಸೂಕ್ತ ಪರಿಹಾರ ನೀಡಿದ್ದಾರೆ.

ಪ್ರತಿಮೆಯು ಕಳೆದ 42 ವರ್ಷಗಳಿಂದ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯಲ್ಲಿದೆ. ಕಳೆದ ವರ್ಷ ವಿಗ್ರಹದ ಕೈ ಮುರಿದು ಹೋಗಿತ್ತು. ಅದಕ್ಕಾಗಿಯೇ ಹೊಸ ಮೂರ್ತಿಯ ಸಿದ್ಧ ಮಾಡಲಾಗಿದೆ. ಆದರೆ ನಿನ್ನೆ ಅಚಾನಕ್ಕಾಗಿ ಬುದ್ಧನ ವಿಗ್ರಹ ಇಡಲಾಗಿತ್ತು.

ಈ ಘಟನೆಯ ಬಗ್ಗೆ ನಾನು ಈಗಾಗಲೇ ಸಿಂಡಿಕೇಟ್​​ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದ್ದೇನೆ. ಸಮಿತಿ ಸದಸ್ಯರು ಸರಸ್ವತಿ ವಿಗ್ರಹ ಇಡಬೇಕು ಎಂಬುದು ನಿಲುವಾಗಿದೆ. ಸರಸ್ವತಿ ವಿಗ್ರಹವನ್ನು ಈ ಹಿಂದಿನ ಹಾಗೇಯೇ ಇಡಲಾಗಿದೆ ಎಂದು ಕುಲಪತಿ ಸ್ಪಷ್ಟಪಡಿಸಿದ್ದಾರೆ.

ಬುದ್ಧನ ವಿಗ್ರಹವನ್ನು ವಿಶ್ವವಿದ್ಯಾಲಯದಲ್ಲಿ ಎಲ್ಲಿ ಇಡಬೇಕು ಎಂದು ಈಗಾಗಲೇ ಸಿಂಡಿಕೇಟ್​​​​ ಸಮಿತಿ ರಚಿಸಲಾಗಿದೆ. ಸಮಿತಿ ಬುದ್ಧನ ವಿಗ್ರಹ ಎಲ್ಲಿ ಇಡಬೇಕು ಎಂದು ಸೂಚಿಸುತ್ತದೆಯೋ ಅಲ್ಲೇ ಇಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ನಡೆದ ಘಟನೆ ಬಗ್ಗೆ ಮಾತನಾಡಿದ ಕುಲಪತಿ ನಾನು ಬೇರೆ ಕಡೆ ಇದ್ದಾಗ ಈ ಘಟನೆ ನಡೆದಿದೆ. ಅನುಮತಿ ಇಲ್ಲದೇ ಬುದ್ಧನ ವಿಗ್ರಹ ಇಡಲಾಗಿತ್ತು. ಅದರ ಬಗ್ಗೆ ಪೋಲಿಸರಿಗೆ ದೂರು ನೀಡಲಾಗಿದ್ದು, ಸಿಸಿ ಟಿವಿ ದಾಖಲೆಗಳನ್ನು ಪೋಲಿಸರಿಗೆ ನೀಡಲಾಗಿದೆ ಎಂದು ಕುಲಪತಿ ವೇಣುಗೋಪಾಲ್​​​​​​​ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)