ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ.
ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ಚಾಣಕ್ಯ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.
ಹೆಚ್ಚು ಸೃಜನಾಶೀಲನಾಗಿರುವ ವ್ಯಕ್ತಿಯ ಯಶಸ್ಸಿನ ಸಾಧ್ಯತೆಗಳು ತುಂಬಾ ಬಲವಾಗಿರುತ್ತದೆ ಎಂದು ಚಾಣಕ್ಯ ನಂಬಿದ್ದರು. ಅಂದರೆ, ಸೃಜನಾತ್ಮಕ ವ್ಯಕ್ತಿಯು ಜೀವನದಲ್ಲಿ ತುಂಬಾ ಯಶಸ್ಸು ಸಾಧಿಸುತ್ತಾನೆ. ಸೃಜನಾಶೀಲತೆಯಿಂದ ತುಂಬಿರುವ ವ್ಯಕ್ತಿಯು ಆತ್ಮವಿಶ್ವಾಸದಿಂದ ಉಳಿದಿದ್ದಾನೆ ಎಂದು ಚಾಣಕ್ಯ ನಂಬಿದ್ದರು. ಓರ್ವ ವ್ಯಕ್ತಿಗೆ ಗೆಲುವು ನೀಡಲು ಆತ್ಮವಿಶ್ವಾಸ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಆತ್ಮ ವಿಶ್ವಾಸ ಕಳೆದುಕೊಳ್ಳುವ ವ್ಯಕಿಯಿಂದ ಗೆಲುವು ಸಹ ದೂರ ಓಡುತ್ತದೆ. ಗೆಲುವು ಮಾತ್ರವಲ್ಲ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ಕೂಡ ಅಂತಹ ವ್ಯಕ್ತಿಗಳಿಂದ ಬಹುದೂರ ಸಾಗುತ್ತಾಳೆ.
ಇದನ್ನೂ ಓದಿರಿ: ವಿಜಯವಾಣಿ ವರದಿ ಪರಿಣಾಮ: ಕುಡಿವ ನೀರಿಗೆ 100 ಕೋಟಿ ರೂ. ಅನುದಾನ ನೀಡಿದ ಸರ್ಕಾರ
ಸೃಜನಾತ್ಮಕ ವ್ಯಕ್ತಿಯ ಚಿಂತನೆ ಯಾವಾಗಲೂ ಧನಾತ್ಮಕ
ಚಾಣಕ್ಯನ ಪ್ರಕಾರ ಸೃಜನಾಶೀಲ ವ್ಯಕ್ತಿ ಪ್ರತಿಯೊಂದು ಕೆಲಸವನ್ನು ಸವಾಲಾಗಿ ಸ್ವೀಕರಿಸುತ್ತಾನೆ. ಅಂತಹ ವ್ಯಕ್ತಿಗಳು ನೆಗೆಟಿವ್ ಅಲ್ಲ. ಆದರೆ, ಪ್ರತಿಯೊಂದು ಕೆಲಸದೆಡೆಗಿನ ಅವರ ಮನೋಭಾವ ಪಾಸಿಟಿವ್ ಆಗಿರುತ್ತದೆ. ಅಂತಹ ವ್ಯಕ್ತಿಗಳು ಸಮಸ್ಯೆಯಲ್ಲಿ ನಂಬಿಕೆ ಇಡುವುದಿಲ್ಲ. ಆದರೆ, ಸಮಸ್ಯೆಯ ಪರಿಹಾರದ ಮೇಲೆ ಹೆಚ್ಚು ನಂಬಿಕೆ ಇಟ್ಟಿರುತ್ತಾನೆ.
ಸ್ವಂತಿಕೆಯ ಕೊರತೆ ಇರುವುದಿಲ್ಲ
ಚಾಣಕ್ಯನ ಪ್ರಕಾರ ಸೃಜನಾಶೀಲ ವ್ಯಕ್ತಿ ತನ್ನದೇ ಮೂಲಭೂತ ಐಡಿಯಾಗಳನ್ನು ಹೊಂದಿರುತ್ತಾನೆ. ತಮ್ಮದೇ ಆದ ಮೂಲ ಆಲೋಚನೆಗಳನ್ನು ಇತರರ ಉತ್ತಮ ಆಲೋಚನೆಗಳೊಂದಿಗೆ ಸೇರಿಸಿ ಕೆಲಸವನ್ನು ಪೂರ್ಣಗೊಳಿಸುವರು. ಇನ್ನು ಅಂತಹ ವ್ಯಕ್ತಿಗಳನ್ನು ಎಲ್ಲರೂ ಪ್ರೀತಿಯಿಂದ ಗೌರವಿಸುವರು. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಹೊಸ ಆಲೋಚನೆಗಳು ಬಹಳ ಮುಖ್ಯ. ಸೃಜನಶೀಲ ವ್ಯಕ್ತಿಗಳಲ್ಲಿ ಹೊಸ ಆಲೋಚನೆಗಳ ಸಾಗರವೇ ಇರುತ್ತದೆ. ಅಂತಹ ವ್ಯಕ್ತಿಗಳು ಮನೆ, ಕುಟುಂಬ, ಸಂಸ್ಥೆ, ಕೆಲಸದ ಸ್ಥಳ ಮತ್ತು ರಾಷ್ಟ್ರಕ್ಕೆ ಮಹತ್ವದ ಕಾಣಿಕೆಯನ್ನು ನೀಡುತ್ತಾರೆ. ಅಂತಹ ವ್ಯಕ್ತಿಗಳು ಇತರರಿಗೆ ಮಾರ್ಗದರ್ಶಕರು ಮತ್ತು ಸ್ಫೂರ್ತಿಯ ಚಿಲುಮೆ ಆಗಿರುತ್ತಾರೆ. (ಏಜೆನ್ಸೀಸ್)