ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿ ಎಲ್ಲ ವಿಷಯಗಳಲ್ಲೂ ಪಡೆದುಕೊಂಡಿದ್ದು ಕೇವಲ 35 ಅಂಕ!

ನವದೆಹಲಿ: ಅಪರೂಪ ಎನಿಸುವಂತ ಪ್ರಕರಣವೊಂದರಲ್ಲಿ ಮುಂಬೈನ ಮೀರಾ ರಸ್ತೆಯ ನಿವಾಸಿಯಾಗಿರುವ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಯೋರ್ವ ಎಲ್ಲ ವಿಷಯಗಳಲ್ಲಿ ಸಮಾನಾಂತರವಾಗಿ ಪಾಸ್‌ ಮಾರ್ಕ್ಸ್‌ ಅಷ್ಟನ್ನೇ ತೆಗೆದಿದ್ದಾನೆ.

ಮಹಾರಾಷ್ಟ್ರದ ಎಸ್‌ಎಸ್‌ಸಿ ಪರೀಕ್ಷಾ ಮಂಡಳಿಯಿಂದ ನಡೆಸಿದ್ದ 10 ನೇ ತರಗತಿ ಪರೀಕ್ಷೆಯಲ್ಲಿ ಪ್ರತಿ ವಿಷಯಗಳಲ್ಲೂ ಕೇವಲ 35 ಅಂಕಗಳನ್ನಷ್ಟೇ ತೆಗೆದು ಅಚ್ಚರಿಗೆ ಕಾರಣನಾಗಿದ್ದಾನೆ.

congratulations akshit jadhav.He has scored a PERFECT PASS by scoring 35 marks in each and every subject of SSC Board…

Herambraj Nalawade ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜೂನ್ 9, 2019

ನನ್ನ ಮಗನ ಸ್ಕೋರ್‌ ನೋಡಿ ನನಗೆ ಆಶ್ಚರ್ಯವಾಯಿತು. ಆತ ಶೇ. 55ರಷ್ಟನ್ನು ನಿರೀಕ್ಷೆ ಮಾಡಿದ್ದ. ವಿದ್ಯಾರ್ಥಿಗಳು ಹೆಚ್ಚಿನ ಸ್ಕೋರ್ ಪಡೆಯುವ ನಿರೀಕ್ಷೆಯಲ್ಲಿ ಪ್ರತಿ ಪ್ರಶ್ನೆಗೂ ಉತ್ತರಿಸಲು ಪ್ರಯತ್ನಿಸುತ್ತಾರೆ, ಆದರೆ ಅವುಗಳು ಕಡಿಮೆ ಅಂಕಗಳೊಂದಿಗೆ ಕೊನೆಗೊಳ್ಳಬಹುದು. ಈ ಮಧ್ಯೆ ಅಕ್ಷಿತ್‌ ಕೂಡ ಕನಿಷ್ಟ ಪಾಸ್‌ ಅಂಕಗಳನ್ನು ತೆಗೆದುಕೊಂಡಿದ್ದಾನೆ ಮತ್ತು ಪರೀಕ್ಷೆಯನ್ನು ಪೂರೈಸಿದ್ದಕ್ಕಾಗಿ ನಮಗೆ ಸಂತೋಷವಾಗಿದೆ ಎಂದು ವಿದ್ಯಾರ್ಥಿಯ ತಂದೆ ಗಣೇಶ್‌ ಜಾಧವ್‌ ಹೇಳಿದ್ದಾರೆ.

ಶನಿವಾರ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಶಾಂತಿನಗರ ಹೈ ಸ್ಕೂಲ್‌ನಲ್ಲಿ ವಿದ್ಯಾರ್ಥಿ ಅಕ್ಷಿತ್‌ ಜಾಧವ್‌ ಎಂಬಾತ ಭಾರಿ ಸುದ್ದಿಗೆ ಗ್ರಾಸನಾಗಿದ್ದಾನೆ. ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಹಲವಾರು ಸ್ಥಳೀಯ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದ ಅಕ್ಷಿತ್‌ನನ್ನು ಸಂದರ್ಶನ ಮಾಡಲು ಕೆಲವು ವರದಿಗಾರರು ಮುನ್ನುಗ್ಗುತ್ತಿದ್ದಾರೆ. (ಏಜೆನ್ಸೀಸ್)