‘ದಿ ವಿಲನ್’​ ಚಿತ್ರ ನೋಡಲು ನಕಲಿ ಟಿಕೆಟ್​ ಬಳಸಿದವರಿಗೆ ಬಿಗ್​ ಶಾಕ್​!​

ಚಾಮರಾಜನಗರ: ಬಹು ನಿರೀಕ್ಷಿತ ‘ದಿ ವಿಲನ್​’ ಚಿತ್ರ ವೀಕ್ಷಿಸಲು ನೂರಕ್ಕೂ ಹೆಚ್ಚು ನಕಲಿ ಟಿಕೆಟ್​ ಬಳಸಿ ಚಿತ್ರಮಂದಿರ ಪ್ರವೇಶಿಸಿದ್ದ ಪ್ರೇಕ್ಷರನ್ನು ಥಿಯೇಟರ್​ ಸಿಬ್ಬಂದಿ ಹೊರ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಬೆಳಗ್ಗೆ ಏಳು ಗಂಟೆಗೆ ಸಿನಿಮಾ ಪ್ರದರ್ಶನವನ್ನು ಪ್ರಾರಂಭಿಸಲಾಗಿತ್ತು. ಗಡಿ ಜಿಲ್ಲೆಯಲ್ಲಿ ಸಾಗರೋಪಾಧಿಯಲ್ಲಿ ಸುದೀಪ್​ ಹಾಗೂ ಶಿವರಾಜ್​ ಕುಮಾರ್​ ಅಭಿಮಾನಿಗಳು ಹರಿದು ಬಂದಿದ್ದರು.

ಚಿತ್ರಮಂದಿರ ಕಿಕ್ಕಿರಿದು ತುಂಬಿದನ್ನು ಬಂಡವಾಳವನ್ನಾಗಿಸಿಕೊಂಡ ಕೆಲವರು ಟಿಕೆಟನ್ನು ಕಲರ್​ ಜೆರಾಕ್ಸ್​ ಮಾಡಿಸಿಕೊಂಡು ಚಿತ್ರಮಂದಿರ ಪ್ರವೇಶಿಸಿದ್ದಾರೆ. ಥಿಯೇಟರ್​ ಸಿಬ್ಬಂದಿಯ ಗಮನಕ್ಕೆ ಬಂದ ಕೂಡಲೇ ಎಲ್ಲಾ ನಕಲಿ ಟಿಕೆಟ್​ಗಳನ್ನು ಪಡೆದು ಹೊರದಬ್ಬಿದ್ದಾರೆ. ಇದೇ ವೇಳೆ ಚಿತ್ರಮಂದಿರದ ಬಳಿ ನೂಕು ನುಗ್ಗಲು ಉಂಟಾಗಿದ್ದರಿಂದ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಿದರು.

ಬಹು ನಿರೀಕ್ಷಿತ ದಿ ವಿಲನ್​ ಚಿತ್ರದಲ್ಲಿ ಚಂದನವನದ ಇಬ್ಬರು ಚಕ್ರವರ್ತಿಗಳಾದ ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್​ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ನಟಿಸಿದ್ದಾರೆ. (ದಿಗ್ವಿಜಯ ನ್ಯೂಸ್​)