ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಚಾಮರಾಜನಗರ : ನಗರದ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಸುಮಾರು 2.50 ಕೋಟಿ ರೂ. ಅನುದಾನದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು. 22 ಬಸ್‌ಗಳು ನಿಲ್ಲಬಹುದಾದ ಸುಸಜ್ಜಿತ ಬಸ್ ಶೆಲ್ಟರ್, ನಿಲ್ದಾಣದ ಒಳಗೆ ಸಿಮೆಂಟ್ ಕಾಂಕ್ರಿಟ್ ನೆಲಹಾಸು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಗೃಹ ಹಾಗೂ ಸಿಸಿ ಚರಂಡಿ ನಿರ್ಮಿಸಲಾಗುವುದು. ಇನ್ನು 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ನಗರಸಭಾ ಸದಸ್ಯರಾದ ರಾಜಪ್ಪ, ಭಾಗ್ಯಮ್ಮ, ಆಶಾ, ಮಮತಾ, ಗೌರಮ್ಮ, ಬಸವಣ್ಣ, ಚಂದ್ರಶೇಖರ್, ಪ್ರಕಾಶ್ ಮುಖಂಡರಾದ ಸಯ್ಯದ್ ರಫೀ, ಬಾಲಸುಬ್ರಹ್ಮಣ್ಯಂ, ಚಂಗುಮಣಿ, ಶ್ರೀಕಾಂತ್, ಕಂಡಕ್ಟರ್ ಸೋಮು, ನಗರಸಭಾ ಆಯುಕ್ತ ರಾಜಣ್ಣ, ಎಇಇ ವಿಜಯ್‌ಕುಮಾರ್, ಎಇಇ ಲತಾ, ರವಿ, ಬಸವಣ್ಣ ಇತರರಿದ್ದರು.