More

  ಅಧ್ಯಕ್ಷರಾಗಿ ಎಚ್.ವಿ.ಚಂದ್ರು ನೇಮಕ

  ಚಾಮರಾಜನಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯನ್ನು ನೇಮಿಸಿ ಗುರುವಾರ ಆದೇಶ ಹೊರಡಿಸಲಾಗಿದೆ.

  ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಎಚ್.ವಿ.ಚಂದ್ರು, ಉಪಾಧ್ಯಕ್ಷರಾಗಿ ನಲ್ಲೂರು ಸೋಮೇಶ್ವರ್, ಎಸ್.ಪ್ರಭುಪ್ರಸಾದ್, ಉದ್ದಗೂರು ಸಿದ್ದರಾಜು, ಎಸ್‌ಆರ್‌ಎಸ್ ರಾಜಶೇಖರ್ ಮತ್ತು ಕಬ್ಬಳ್ಳಿ ಕೆ.ಎನ್.ಪ್ರದೀಪ್‌ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

  ಸದಸ್ಯರಾಗಿ ಆರ್.ಉಮೇಶ್, ಶಿವಮೂರ್ತಿ, ಬಿ.ಪಿ.ನಾಗರಾಜಮೂರ್ತಿ, ಕೆ.ಬಿ.ಚಿನ್ನಸ್ವಾಮಿ, ಉಮಾಪತಿ, ಎಂ.ಪ್ರದೀಪ್, ರವಿಕುಮಾರ್, ರಾಚಪ್ಪ, ದಯಾನಿಧಿ, ರವಿ, ಅಕ್ತರ್ ಪಾಷಾ, ಆರ್.ರಾಜೇಂದ್ರ, ಎಚ್.ಎನ್.ಜಯರಾಜು, ಉಮ್ಮತ್ತೂರು ಭಾಗ್ಯ ಹಾಗೂ ಎಂ.ದೇವರಾಜು ಅವರನ್ನು ನೇಮಿಸಲಾಗಿದೆ. ಸದಸ್ಯ ಕಾರ್ಯದರ್ಶಿಯಾಗಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರನ್ನು ನೇಮಿಸಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್ ಆದೇಶ ಹೊರಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts