More

  ಅಳಿಯನಿಗೆ ಟಿಕೆಟ್ ಕೊಡಿಸುವ ಪ್ರಯತ್ನವನ್ನು ಕೈಬಿಡಲಿ

  ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಸಂಸದ ವಿ.ಶ್ರೀನಿವಾಸಪ್ರಸಾದ್ ತಮ್ಮ ಅಳಿಯ ಡಾ.ಮೋಹನ್‌ಕುಮಾರ್‌ಗೆ ಕೊಡಿಸುವ ಪ್ರಯತ್ನವನ್ನು ಕೈ ಬಿಡಬೇಕು ಎಂದು ಬಿಜೆಪಿ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಒತ್ತಾಯಿಸಿದರು.

  ಸರ್ಕಾರಿ ವೈದ್ಯರಾಗಿದ್ದ ಡಾ.ಮೋಹನ್‌ಕುಮಾರ್ ಅವರನ್ನು ಹುದ್ದೆಗೆ ರಾಜೀನಾಮೆ ಕೊಡಿಸಿ ಚುನಾವಣೆಗೆ ನಿಲ್ಲಿಸಲು ಕರೆತರಬೇಕಿರಲಿಲ್ಲ. ನಾವು ವಿ.ಶ್ರೀನಿವಾಸಪ್ರಸಾದ್ ಅವರಿಗಾಗಿ ಆಯಸ್ಸು, ಹಣ ಕಳೆದುಕೊಂಡಿದ್ದೇವೆ. ಇವರನ್ನು ಬೆಂಬಲಿಸಿ ಅನೇಕ ದಲಿತ ನಾಯಕರು ಹತಾಶರಾಗಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ನಾವೆಲ್ಲ ಆಕಾಂಕ್ಷಿಗಳಾಗಿದ್ದು, ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಕ್ಷೇತ್ರದಲ್ಲಿರುವ ದಲಿತ ಮುಖಂಡರಿಗೆ ಅವರು ಬೆಂಬಲ ನೀಡಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ಈ ಹಿಂದೆ ವಿ.ಶ್ರೀನಿವಾಸಪ್ರಸಾದ್ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಿದ್ದರು. ಆದರೆ ಈಗ ಅವರೇ ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡಿರುವುದು ವಿಪರ್ಯಾಸ. ಅವರ ಮೇಲೆ ಅಪಾರ ಗೌರವವಿದೆ. ಕೂಡಲೇ ಅವರು ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸುವ ಯತ್ನ ಬಿಟ್ಟು ಬೇರೆಯವರನ್ನು ಬೆಂಬಲಿಸಬೇಕು ಎಂದು ಹೇಳಿದರು. ಬಿಜೆಪಿ ಮುಖಂಡರಾದ ಮುತ್ತಿಗೆ ಮೂರ್ತಿ, ಭಾನುಪ್ರಕಾಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts