More

  ಕೆ.ಶಿವರಾಮ್ ನಿಧನಕ್ಕೆ ಸಂತಾಪ

  ಚಾಮರಾಜನಗರ : ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರಿಗೆ ಛಲವಾದಿ ಮಹಾಸಭಾ ಮತ್ತು ಹಲವು ಜನಪರ ಸಂಘಟನೆಗಳ ವತಿಯಿಂದ ಗುರುವಾರ ಸಂತಾಪ ಸೂಚಿಸಲಾಯಿತು.

  ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಉದ್ಯಾನದ ಮುಂಭಾಗ ಸೇರಿದ ಛಲವಾದಿ ಮಹಾಸಭಾ ಮತ್ತು ಹಲವು ಸಂಘಟನೆಗಳ ಮುಖಂಡರು ಕೆ.ಶಿವರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂತಾಪ ಸೂಚಿಸಿದರು. ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದ ಕೆ.ಶಿವರಾಮ್ ಹಲವಾರು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ದೀನ-ದಲಿತರಿಗೆ ಅಪಾರವಾದ ಅನುಕೂಲ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು.

  ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅನೇಕ ಭೂರಹಿತರಿಗೆ ಭೂಮಿ ಕೊಡಿಸಿದ್ದರು. ಚಿತ್ರನಟರಾಗಿಯೂ ಅಪಾರವಾದ ಜನಮನ್ನಣೆ ಗಳಿಸಿದ್ದರು ಎಂದರು. ಸಿ.ಎಂ.ಕೃಷ್ಣಮೂರ್ತಿ, ಕೆ.ಆರ್.ನಾರಾಯಣ್, ಸಿ.ಕೆ.ಮಂಜುನಾಥ್, ವಾಸು ಹೊಂಡರಬಾಳು, ಕೆ.ಎಂ.ನಾಗರಾಜು, ಸಿ.ಎಂ.ನರಸಿಂಹಮೂರ್ತಿ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts