More

    ಕನ್ನಡಿಗರ ಸಮಗ್ರ ಅಭಿವೃದ್ಧಿಯಾಗಲಿ

    ಚಾಮರಾಜನಗರ: ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ನಗರಸಭಾ ಮಾಜಿ ಸದಸ್ಯೆ ಪದ್ಮಪುರುಷೋತ್ತಮ್ ತಿಳಿಸಿದರು.

    ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸುವರ್ಣಸಂಭ್ರಮ, ಕರ್ನಾಟಕ ಏಕೀಕರಣ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳು ಹಾಗೂ ಕನ್ನಡಿಗರನ್ನು ಕರ್ನಾಟಕ ಏಕೀಕರಣದ ಮೂಲಕ ಒಂದುಗೂಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕವಾಗಿ ರೂಪಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಎಲ್ಲ ಮಹನೀಯರನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಶಿವಲಿಂಗ ಮೂರ್ತಿ ಮಾತನಾಡಿ, ಕರ್ನಾಟಕ ಏಕೀಕರಣದ ಉದ್ದೇಶ ಇಂದಿಗೂ ಪೂರ್ಣವಾಗಿಲ್ಲ. ಕನ್ನಡಿಗರ ಸಮಗ್ರ ಅಭಿವೃದ್ಧಿಗೆ ಹಾಗೂ ಗಡಿ ಪ್ರದೇಶಗಳ ಅಭಿವೃದ್ಧಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಪಡಿಸಬೇಕು ಎಂದರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಕರ್ನಾಟಕ ಏಕೀಕರಣವಾಗಲು ಕನ್ನಡ ಪತ್ರಿಕೆಗಳು ವಿಶೇಷವಾಗಿ ಪ್ರಯತ್ನಿಸಿದವು. ಕನ್ನಡ ಪತ್ರಿಕೆಗಳ ಪ್ರಭಾವದಿಂದ ಕನ್ನಡಿಗರ ಜಾಗೃತಿ ಹೆಚ್ಚಾಯಿತು. ಅನೇಕ ಸಂಘ, ಸಂಸ್ಥೆಗಳು ತಮ್ಮ ತನುಮನಧನವನ್ನು ಅರ್ಪಣೆ ಮಾಡಿದವು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಂಘ ಸಂಸ್ಥೆಗಳ ಹೋರಾಟವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದರು.

    ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ರವಿಚಂದ್ರನ್ ಪ್ರಸಾದ್, ಬಿ.ಕೆ.ಆರಾಧ್ಯ, ಸರಸ್ವತಿ, ಸುರೇಶ್ ಗೌಡ , ಗೋವಿಂದರಾಜು, ಬೊಮ್ಮಾಯಿ, ಲಕ್ಷ್ಮಿ ನರಸಿಂಹ ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts