More

    ಅವಳಿ ಸಹೋದರಿಯರಿಗೆ ನೆರವಾದ ತಹಸೀಲ್ದಾರ್

    ಚಾಮರಾಜನಗರ : ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದ ಅವಳಿ ಸಹೋದರಿಯರ ಮನೆಗೆ ತಹಶೀಲ್ದಾರ್ ಬಸವರಾಜು ಭೇಟಿ ನೀಡಿ, ಶೌಚಾಲಯ ನಿರ್ಮಾಣ ಮಾಡಿಕೊಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ನಗರದ ಸೋಮವಾರಪೇಟೆ ಬಡಾವಣೆಯ ನಿವಾಸಿಗಳಾದ ಗೌರಮ್ಮ ಮತ್ತು ಗಂಗಮ್ಮ ಅವರು ಅವಳಿ ಸಹೋದರಿಯರು ತಂದೆ-ತಾಯಿಯನ್ನು ಕಳೆದುಕೊಂಡು ಸಂಕಷ್ಟದ ಬದುಕು ಸಾಗಿಸುತ್ತಿದ್ದರು. ಇನ್ನೇನೋ ಕುಸಿದು ಬೀಳುವ ಹಂತದಲ್ಲಿದ್ದ ಮನೆ, ಶೌಚಾಗೃಹವಿಲದೇ ಬಯಲಿನಲ್ಲಿ ಸೀರೆ ಕಟ್ಟಿಕೊಂಡು ಸ್ನಾನಮಾಡುವ ಪರಿಸ್ಥಿತಿಯಲ್ಲಿ ಬದುಕುಸಾಗಿಸುತ್ತಿದ್ದರು.

    ಈ ಅವಳಿ ಸಹೋದರಿಯರ ಸಂಕಷ್ಟದ ಬದುಕಿನ ಕುರಿತು ವಿಜಯವಾಣಿಯಲ್ಲಿ ಅ.4 ರಂದು ‘ಸಂಕಷ್ಟದಲ್ಲಿ ಅವಳಿ ಸಹೋದರಿಯರು’ ಶೀರ್ಷಿಕೆಯಡಿ ವರದಿ ಪ್ರಕಟಮಾಡಿತ್ತು. ಈ ಮಾಹಿತಿಯನ್ನು ತಿಳಿದು ಚಾಮರಾಜನಗರ ತಹಶೀಲ್ದಾರ್ ಬಸವರಾಜ್ ಅವರು ಅಧಿಕಾರಿಗಳ ಜತೆಗೆ ಅವಳಿ ಸಹೋದರಿಯರ ಮನೆಗೆ ಭೇಟಿ ನೀಡಿ ಅವರ ಶೋಚನೀಯ ಸ್ಥಿತಿಯನ್ನು ಕಂಡು ಮರುಕಪಟ್ಟಿದ್ದಾರೆ. ಅವಳಿ ಸಹೋದರಿಯರ ಸಂಕಷ್ಟಗಳನ್ನು ವಿಚಾರಿಸಿ, ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು. ಶೀಘ್ರದಲ್ಲೇ ಶೌಚಗೃಹ ಹಾಗೂ ಶೌಚಾಲಯ ನಿರ್ಮಾಣ ಮಾಡಿಕೊಂಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಅವರು ವಾಸಿಸುತ್ತಿರುವ ಮನೆಯನ್ನು ರಪೇರಿ ಮಾಡಿಸಿಕೊಡುವಂತೆ ಹಾಗೂ ಮೂಲಸೌಕರ್ಯ ಕಲ್ಪಿಸಿಕೊಂಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಮಾನವೀಯತೆ ಮೆರೆದ ತಹಶೀಲ್ದಾರ್:
    ಸೋಮವಾರಪೇಟೆಯ ಅವಳಿ ಸಹೋದರಿಯರ ಮನೆಗೆ ತಹಶೀಲ್ದಾರ್ ಬಸವರಾಜ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ. ಸಹೋದರಿಯರ ಕಷ್ಟವನ್ನು ವಿಚಾರಿಸುವ ಸಂದರ್ಭದಲ್ಲಿ ಅವರನ್ನು ಏನು ಊಟ ಮಾಡಿದ್ದೀರಿ ಎಂದು ಕೇಳಿದ್ದಾರೆ. ಈ ವೇಳೆ ಅಡುಗೆ ಮಾಡಲು ಅನ್ನಭಾಗ್ಯದ ಅಕ್ಕಿಯೂ ಖಾಲಿಯಾಗಿದೆ ಎಂದು ಹೇಳಿದ್ದಾರೆ. ತಹಶಿಲ್ದಾರ್ ಬಸವರಾಜ್ ಅವರು ಸಹೋದರಿಯರಿಗೆ ತಕ್ಷಣವೇ ರೇಷನ್ ಕೊಡಿಸಿದ್ದಾರೆ. ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.

    ವಿಜಯವಾಣಿ ಪತ್ರಿಕೆಯಲ್ಲಿ ಬಂದಿದ್ದ ವರದಿಯನ್ನು ಗಮನಿಸಿ ಅವಳಿ ಸಹೋದರಿಯರ ಮನೆಗೆ ಭೇಟಿ ನೀಡಿದೆ. ಅವರಿಗೆ ಸದ್ಯದಲ್ಲೇ ಶೌಚಾಲಯ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
    ಬಸವರಾಜ್, ತಹಶೀಲ್ದಾರ್, ಚಾಮರಾಜನಗರ.

    ನಮ್ಮ ಬದುಕು ತುಂಬಾ ಕಷ್ಟದ ಸ್ಥಿತಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಮನೆ, ಶೌಚಾಲಯ ನಿರ್ಮೀಸಿಕೊಳ್ಳಲು ಸಾಧ್ಯವೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆ ವರದಿ ಮಾಡಿದ ಕಾರಣಕ್ಕೆ ನಮಗೆ ತಹಶೀಲ್ದಾರ್ ಅವರು ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ರೇಷನ್ ಕೊಡಿಸಿ ದೈರ್ಯತುಂಬಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts