More

    ವ್ಯಕ್ತಿಯ ಪ್ರಾಣ ರಕ್ಷಣೆಗೆ ಮುಂದಾಗಿ

    ಚಾಮರಾಜನಗರ : ಅಪಘಾತದಂತಹ ಸಂದರ್ಭಗಳಲ್ಲಿ ವ್ಯಕ್ತಿಯ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದು ಸಾಧನೆ ಸಂಸ್ಥೆಯ ನಿರ್ದೇಶಕ ಟಿ.ಜಿ.ಸುರೇಶ್ ತಿಳಿಸಿದರು.

    ನಗರದ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜು ಆವರಣದಲ್ಲಿ ನಿಪುಣ ಕೌಶಲ್ಯ ಪ್ರಯೋಗಾಲಯ ವತಿಯಿಂದ ಸೋಮವಾರ ಆಯೋಜಿಸಿದ್ದ ಒಂದು ದಿನದ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಒಬ್ಬ ವ್ಯಕಿಯ್ತ ಜೀವವನ್ನು ಕ್ಷಣ ಮಾತ್ರದಲ್ಲಿ ಕಪಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಅವಕಾಶಗಳು ಎದುರಾದಾಗ ವ್ಯಕ್ತಿಯ ಪ್ರಾಣ ರಕ್ಷಣೆಗೆ ಮೀನಾಮೇಷ ಎಣಿಸದೇ ಅವರ ಪ್ರಾಣ ರಕ್ಷಣೆಗೆ ಮೊದಲು ಮುಂದಾಗಬೇಕು. ಅಪಘಾತ ಹಾಗೂ ಇತರೆ ಸಂದರ್ಭಗಳಲ್ಲಿ ಅಪಾಯಕ್ಕೆ ತುತ್ತಾದ ವ್ಯಕ್ತಿಯನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದನ್ನು ತರಬೇತಿಯಲ್ಲಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಸೇವಾ ಭಾರತಿ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲ, ತರಬೇತಿದಾರ ಸುರೇಶ್, ಮಂಜುನಾಥ್, ಅರುಣ್ ಕುಮಾರ್, ಸುಧಾಕರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts