ಸಹಕಾರ ಸಂಘಗಳ ಸೌಲಭ್ಯ ಪಡೆದು ಸ್ವಾವಲಂಬಿಗಳಾಗಿ

ಯಳಂದೂರು: ಸಹಕಾರ ಸಂಘಗಳ ಸದಸ್ಯರು ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.

ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ಆರಂಭಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿವೆ. ಅನೇಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಯರಗಂಬಳ್ಳಿ ಗ್ರಾಮದಲ್ಲಿ 16 ಕೋಮುಗಳಿದ್ದು ಎಲ್ಲರೂ ಜತೆಗೂಡಿ ಒಂದು ಸಹಕಾರ ಸಂಘವನ್ನು ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ. ಎಲ್ಲರೂ ಇದನ್ನು ಉತ್ತಮವಾಗಿ ನಿರ್ವಹಿಸಿ ಸಹಕಾರ ಧುರೀಣರಾಗಬೇಕು ಎಂದು ಸಲಹೆ ನೀಡಿದರು.

ನನ್ನ ಪ್ರದೇಶಾಭಿವೃದ್ಧಿ ಅನುದಾನದಿಂದ ಸಹಕಾರ ಸಂಘಕ್ಕೆ 5 ಲಕ್ಷ ರೂ. ಅನುದಾನವನ್ನು ನೀಡಲಾಗುವುದು. ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿಗೆ ಗಣಿ ಮತ್ತು ಭೂ ವಿಜ್ಞಾನ ನಿಧಿಯಿಂದ 75 ಲಕ್ಷ ರೂ. ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಹಕಾರ ಸಂಘಗಳ ಉಪ ನಿಬಂಧಕಿ ಜ್ಯೋತಿ ಅರಸ್ ಮಾತನಾಡಿ, ಯಳಂದೂರು ತಾಲೂಕು ಚಿಕ್ಕ ತಾಲೂಕಾಗಿದೆ. ಇಲ್ಲಿ ಇನ್ನೂ 3 ಸಹಕಾರ ಸಂಘಗಳನ್ನು ಸ್ಥಾಪಿಸಲು ಅವಕಾಶವಿದೆ. ಇದಕ್ಕೆ 4000 ಎಕರೆ ಕೃಷಿ ಭೂಮಿ, 600 ಕುಟುಂಬಗಳು ಹಾಗೂ 5 ಕಿ.ಮೀ. ವಿಸ್ತೀರ್ಣ ಇರಬೇಕಿದೆ. ಇದೆಲ್ಲ ಮಾನದಂಡಗಳಿದ್ದು ಸಹಕಾರ ಸಂಘ ಸ್ಥಾಪಿಸುವುದಾದರೆ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಸಂಘದ ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಡಿ.ಸಿ. ಕುಮಾರ್ ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಮುಖ್ಯ ಪ್ರವರ್ತಕ ಡಿ. ಪರಶಿವಮೂರ್ತಿ ಗ್ರಾಪಂ ಅಧ್ಯಕ್ಷ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ, ಸಹಕಾರ ಸಂಘಗಳ ಉಪನಿಬಂಧಕಿ ಶೋಭಾ, ಸಹಕಾರ ಅಭಿವೃದ್ಧಿ ಅಧಿಕಾರಿ ಸುಭಾಷಿಣಿ, ಎಪಿಎಂಸಿ ಸದಸ್ಯ ಮಹೇಶ್, ಡಿ.ಸಿ. ಬಾಬು, ಪಿಡಿಒ ಮಂಜುನಾಥ್, ಪ್ರಭಾರ ಇಒ ಮಲ್ಲಣ್ಣ, ನಿರ್ದೇಶಕರಾದ ಕೆ. ವಿರೂಪಾಕ್ಷ ಎಸ್.ರವಿಚಂದ್ರ, ಗೋವಿಂದೇಗೌಡ, ತ್ಯಾಗರಾಜು, ಹರೀಶ್, ಕೃಷ್ಣಮೂರ್ತಿ, ಮಣಿಕಂಠ, ಕುಸುಮಾ, ಕಮಲಮ್ಮ ಗ್ರಾಪಂ ಸದಸ್ಯರಾದ ಸಿದ್ದರಾಜು, ಮಲ್ಲಿಕಾರ್ಜುನಸ್ವಾಮಿ, ಶೋಭಾ ಸೇರಿದಂತೆ ಅನೇಕರು ಇದ್ದರು.

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…