More

  ಸಿದ್ದಪ್ಪಾಜಿ ಕೊಂಡೋತ್ಸವಕ್ಕೆ ಚಾಲನೆ

  ಕೊಳ್ಳೇಗಾಲ: ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಎರಡು ದಿನ ನಡೆಯುವ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಹಬ್ಬಕ್ಕೆ ಗುರುವಾರ ಚಾಲನೆ ದೊರಕಿದೆ.

  ಬಡಾವಣೆಯಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಮೂರು ಕೋಮಿನ ಯಜಮಾನರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಬಡಾವಣೆಯ ಹೊರವಲಯದ ಶನೈಶ್ಚರ ದೇವಾಲಯದ ಬಳಿ ಮಧ್ಯಾಹ್ನ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯಗಳನ್ನು ಶುಚಿಗೊಳಿಸಲಾಯಿತು. ನಂತರ ಕಂಡಾಯಗಳಿಗೆ ನೀಲಗಾರರು ಹೂ-ಹೊಂಬಾಳೆಗಳಿಂದ ಅಲಂಕೃತ ಗೊಳಿಸಿದ ಬಳಿಕ ಪೂಜೆ ಸಲ್ಲಿಸಲಾಯಿತು. ಬಡಾವಣೆಯ ಹೊರಭಾಗದ ಎರಡು ದ್ವಾರಗಳಲ್ಲಿ ಧೂಳುಮರಿ ಪೂಜೆ ನಡೆಸಲಾಯಿತು. ರಾತ್ರಿ 8 ಗಂಟೆಗೆ ಸಿದ್ದಪ್ಪಾಜಿ ಕಂಡಾಯಗಳ ಸಮ್ಮುಖದಲ್ಲಿ ಕೊಂಡದ ಮಾಳದಲ್ಲಿ ಸಿದ್ದಪಡಿಸಿರುವ ಕೊಂಡೊಕ್ಕೆ ಅಗ್ನಿ ಸ್ಪರ್ಶಿಸಲಾಯಿತು. ಶುಕ್ರವಾರ ಬೆಳಗ್ಗೆ 6ಗಂಟೆಗೆ ನೀಲಗಾರರಾದ ಮಹಾಲಿಂಗ, ಗಂಗಮಲ್ಲ, ಗಿರೀಶ, ನಿಂಗರಾಜು, ರಾಜಣ್ಣ, ಕುಮಾರ ಅವರು ಕಂಡಾಯ ಹೊತ್ತು ಕೊಂಡ ಹಾಯಲಿದ್ದಾರೆ. ಹಬ್ಬದ ಹಿನ್ನಲೆ ಬಡಾವಣೆ ಎಲ್ಲ ಬೀದಿಗಳನ್ನು ಹಸಿರು ತೋರಣ, ಹೂವು ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ.

  ಶಾಸಕರ ಭೇಟಿ: ಶ್ರೀ ಸಿದ್ದಪ್ಪಾಜಿ ದೇವಾಲಯಕ್ಕೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕರನ್ನು ಯಜಮಾನರು ಸನ್ಮಾನಿಸಿ ಗೌರವಿಸಿದರು. ದಲಿತ ಜನಾಂಗದ ಯಜಮಾನರಾದ ಪುಟ್ಟಮಾದಯ್ಯ, ಸಿದ್ದರಾಜು, ಶಿವಕುಮಾರ್, ಟಿ.ನಂಜಯ್ಯ, ಸೋಮಣ್ಣ, ಮಾದೇಶ, ಮುದ್ದುಮಾದ, ಮಾದೇಶ, ಸಿದ್ದರಾಜು ಬತ್ತಯ್ಯ, ಮಹೇಶ, ನಾಯಕ ಜನಾಂಗದ ಯಜಮಾನರಾದ ಸಿದ್ದನಾಯಕ, ಗೋವಿಂದನಾಯಕ, ವೆಂಕಟೇಶ ನಾಯಕ, ಶಿವಕುಮಾರ್, ಬಸವರಾಜು ನಾಯಕ, ನಂಜನಾಯಕ, ಕುರುಬ ಜನಾಂಗದ ಯಜಮಾನರಾದ ಬೋಳೆಗೌಡ, ಲಿಂಗೇಗೌಡ, ಶಿವಣ್ಣೇಗೌಡ, ತಮ್ಮಯ್ಯಗೌಡ, ಪುಟ್ಟೇಗೌಡ ಇದ್ದರು.

  See also  ಆಡಳಿತ ಮಾದರಿ ಯೋಜನೆ ಅಳವಡಿಕೆ ಕಡ್ಡಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts