ಹನೂರು: ತಾಲೂಕಿನ ಕಂಡಯ್ಯನಪಾಳ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ವನಜಾಕ್ಷಿ, ಉಪಾಧ್ಯಕ್ಷೆಯಾಗಿ ಜಯಲಕ್ಷ್ಮೀ ಅವಿರೋಧ ಆಯ್ಕೆಯಾದರು.
ಸೋಮವಾರ ಎರಡೂ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಇಬ್ಬರ ಹೊರತು ಬೇರ‌್ಯಾರೂ ನಾಮಪತ್ರ ಸಲಿಸದ ಕಾರಣ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಿದ್ಧಲಿಂಗಮೂರ್ತಿ ಕಾರ್ಯನಿರ್ವಹಿಸಿದರು. ಚನ್ನಾಲಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ.ಮಾದೇಶ್, ಮುಖಂಡರಾದ ರಾಜೇಶ್, ರಮೇಶ್, ದಾಸೇಗೌಡ ಇದ್ದರು.
ಕಳೆದ ವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಶಾಂತಿ, ಕೆಂಪರಾಜಮ್ಮ, ಶೋಭಾ, ವೆಂಕಟಮ್ಮ, ವನಜಾಕ್ಷಿ, ಆಶಾ, ನಯನ, ಶಿವಮ್ಮ, ಪರಿಶಿಷ್ಟ ಜಾತಿಯಿಂದ ಜಯಲಕ್ಷ್ಮೀ, ಹಿಂದುಳಿದ ವರ್ಗ ಎ ಯಿಂದ ಮುರುಗೇಶ್ ಹಾಗೂ ಬಿ ವರ್ಗದಿಂದ ಗೀತಾ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದರು.
TAGGED:chamarajanagara news