More

  ಕೆರೆಗೆ ನೀರು ತುಂಬಿಸುವಂತೆ ಮನವಿ ಸಲ್ಲಿಕೆ

  ಚಾಮರಾಜನಗರ: ತಾಲೂಕಿನ ಬಂಡಿಗೆರೆ ಕೆರೆ ವ್ಯಾಪ್ತಿಯ ರೈತರು ಬಂಡಿಗೆರೆ ಕೆರೆಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

  ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ರೈತರು ಮಾತನಾಡಿ, ತಾಲೂಕಿನ ಕೋಡಿಮೋಳೆ ಕೆರೆಯಿಂದ ಬಂಡಿಗೆರೆ ಕೆರೆ, ಚಿಕ್ಕಕೆರೆ, ದೊಡ್ಡಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಪೈಪ್‌ಲೈನ್ ಕೆಲಸ ಮುಗಿದಿದ್ದರೂ ಸಹ ಕಾಮಗಾರಿ ಪೂರ್ಣಗೊಳ್ಳದೆ ಕೆರೆಗಳಿಗೆ ನೀರು ಇಲ್ಲದಂತಾಗಿದೆ. ಈ ಯೋಜನೆಯ ಕಾಮಗಾರಿ ಕಳೆದ 5 ವರ್ಷಗಳಿಂದಲೂ ಆಮೆಗತಿಯಲ್ಲಿ ನಡೆಯುತ್ತಿದೆ. ಮಳೆ ಸಕಾಲಕ್ಕೆ ಆಗದೇ ಅಂತರ್ಜಲ ಮಟ್ಟ ತುಂಬಾ ಕಡಿಮೆಯಾಗುತ್ತಿದೆ. ಕೊಳವೆ ಬಾವಿಗಳಲ್ಲೂ ಸಹ ನೀರು ಕಡಿಮೆಯಾಗಿದೆ. ಇದರಿಂದ ಕೆರೆಯ ಅಚ್ಚುಕಟ್ಟುದಾರರ ಬೆಳೆಗಳಿಗೆ ಹಾಗೂ ದನಕರುಗಳಿಗೆ ನೀರಿನ ಅಭಾವ ಉಂಟಾಗಿದ್ದು ತುಂಬಾ ಅನಾನುಕೂಲವಾಗಿದೆ ಎಂದರು.

  ಜಿಲ್ಲಾಧಿಕಾರಿಗಳು ಸಂಭಂದಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

  ಈ ಸಂದರ್ಭದಲ್ಲಿ ರೈತರಾದ ಜಯಸಿಂಹ, ಹೊಸೂರು ಜಗದೀಶ್, ಮಹದೇವಸ್ವಾಮಿ (ಸೋಮೇಶ್), ನಾಗೇಂದ್ರಸ್ವಾಮಿ, ಚಂದ್ರಶೇಖರ್, ಮಹದೇವಶೆಟ್ಟಿ, ಕಾವೇರಿ ಶಿವಕುಮಾರ್, ಸಿದ್ದೇಶ್ ಹಾಗೂ ಇತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts