More

  ಶಂಕರರಿಂದ ಸನಾತನ ಧರ್ಮ ಪ್ರಜ್ವಲಿಸಿದೆ

  ಚಾಮರಾಜನಗರ: ಅದ್ವೈತ ಚಿಂತನೆಯ ಮೂಲಕ ಇಡೀ ಜಗತ್ತಿಗೆ ಆಧ್ಯಾತ್ಮವನ್ನು ಬೋಧಿಸಿದ ನೀಡಿದ ಶ್ರೀಶಂಕರಾಚಾರ್ಯರು ಭಾರತದ ಸನಾತನ ಧರ್ಮವನ್ನು ಪ್ರಜ್ವಲಿಸುವಂತೆ ಮಾಡಿದ್ದಾರೆ ಎಂದು ಸಂಸ್ಕೃತಿ ಚಿಂತಕ ಹಾಗೂ ಶ್ರೀಶಂಕರ ಅಭಿಯಾನದ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

  ನಗರದ ಭ್ರಮರಾಂಭ ಬಡಾವಣೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್, ಶಂಕರ ತತ್ವ ಪ್ರಚಾರ ಅಭಿಯಾನ, ಶ್ರೀಶಾರದಾ ಭಜನಾ ಮಂಡಳಿ ವತಿಯಿಂದ ಶನಿವಾರ ಆಯೋಜಿಸಿದ್ದ ಶ್ರೀಶಂಕರಾಚಾರ್ಯ ಜಯಂತಿ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ಸುಮಾರು 1300 ವರ್ಷಗಳ ಹಿಂದೆ ಭಾರತೀಯ ಸನಾತನ ಧರ್ಮ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಶ್ರೀಶಂಕರರು ತಮ್ಮ 32 ವರ್ಷಗಳಲ್ಲೇ ಅದ್ವಿತೀಯ ಸಾಧನೆಯನ್ನು ಮಾಡಿ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಮಠಗಳನ್ನು ಸ್ಥಾಪನೆ ಮಾಡಿದರು. ಚತುರ್ವೇದಗಳನ್ನು ಪುನಃ ಸ್ಥಾಪಿಸಿ ಭಾರತೀಯ ಸನಾತನ ಧರ್ಮ ಶಾಶ್ವತವಾಗಿ ಉಳಿಯುವಂತೆ ಮಾಡಿದರು. ಸನಾತನ ಧರ್ಮದ ಅರ್ಥವನ್ನು ಪ್ರತಿಯೊಬ್ಬರಿಗೂ ವಿವರಿಸಿ, ಪರಿಶುದ್ಧವನ್ನಾಗಿ ಮಾಡಿ ಅದ್ವೈತ ತತ್ವವನ್ನು ತಿಳಿಸಿದ್ದಾರೆ ಎಂದರು.

  ಅದ್ವೈತ ತತ್ವವು ವಿಶ್ವ ಮಾನ್ಯವಾಗಿದ್ದು , ಪ್ರತಿ ಕ್ಷೇತ್ರದಲ್ಲೂ ಅದ್ವೈತ ತತ್ವದ ಚಿಂತನೆಗಳು ಅರಳಿವೆ. ಮನೆಮನೆಗಳಲ್ಲೂ ಶಂಕರಾಚಾರ್ಯರ ಅದ್ವೈತ ಚಿಂತನೆಗಳನ್ನು ತಿಳಿಸುವ ಕಾರ್ಯವನ್ನು ಶ್ರೀಶಂಕರ ತತ್ವ ಪ್ರಸಾರ ಅಭಿಯಾನ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಮಕ್ಕಳು ಮಹಿಳೆಯರು ಹಾಗೂ ವಿಶೇಷವಾಗಿ ಯುವಕರು ಅದ್ವೈತ ಚಿಂತನೆಯ ಸಾರವನ್ನು ತಿಳಿದು ಜೀವನವನ್ನು ಪರಿಪೂರ್ಣಗೊಳಿಸಿಕೊಂಡು ಶ್ರೇಷ್ಠರಾಗಬೇಕಾಗಿದೆ ಎಂದು ಸಲಹೆ ನೀಡಿದರು.

  ಜೈ ಹಿಂದ್ ಪ್ರತಿಷ್ಠಾನದ ಮಾರ್ಗದರ್ಶಕ ಗುಂಡ್ಲುಪೇಟೆ ರಮೇಶ್ ಮಾತನಾಡಿ, ಆಧ್ಯಾತ್ಮ ಚಿಂತನೆಗಳ ಮೂಲಕ ಮಾನವ ತನ್ನ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಲು ಇರುವ ಮಾರ್ಗ ಭಗವಂತನ ಸ್ಮರಣೆ. ಶಂಕರರು ಅದ್ವೈತ ಚಿಂತನೆಯ ಮೂಲಕ ಎಲ್ಲಾ ನೀತಿ ಮಾರ್ಗಗಳನ್ನು ತಿಳಿಸಿದ್ದಾರೆ. ಶಂಕರೋತ್ಸವದ ಮೂಲಕ ಜನರಿಗೆ ತಿಳಿಸುವ ಕಾರ್ಯ ಮಾಡುತ್ತಿರುವುದು ಸೂಕ್ತ ಕಾರ್ಯವಾಗಿದೆ ಎಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಕೆ.ವಿ.ಅನಿತಾ, ಶ್ರಾವ್ಯ ಋಗ್ವೇದಿ, ಧನುಷ್‌ರಾವ್, ಶಾರದಾ ಭಜನಾ ಮಂಡಳಿಯ ಆಶಾ, ಕುಸುಮ ಋಗ್ವೇದಿ , ಋಗ್ವೇದಿ ಯೂತ್ ಕ್ಲಬ್ ಕಾರ್ತಿಕ್ ಸುಪ್ರಿಯಾ,ಸುಹಾಸ್, ದಿಲೀಪ್ ಹಾಗೂ ಇತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts