More

  ಚಾ.ನಗರ ಸ್ವರ್ಗದ ಬಾಗಿಲು ಎಂದಿದ್ದ ಡಾ.ರಾಜ್

  ಚಾಮರಾಜನಗರ: ವರನಟ ಡಾ.ರಾಜ್‌ಕುಮಾರ್ ಅವರ ಜೀವನ, ಆದರ್ಶನ, ನಡೆ, ನುಡಿ ಎಲ್ಲವೂ ಕೂಡ ಪರಿಶುದ್ಧವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ಬಣ್ಣಿಸಿದರು.

  ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಹಾಗೂ ಗಾನ ಕೋಗಿಲೆ ಎಸ್.ಜಾನಿಕ ಅವರ ಜನ್ಮದಿನೋತ್ಸವ ಅಂಗವಾಗಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಡಾ.ಎಸ್.ಸಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಗುರುವಾರ ಆಯೋಜಿಸಿದ್ದ ಗೀತ ಗಾಯನ ಹಾಗೂ ರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ಡಾ. ರಾಜ್‌ಕುಮಾರ್ ಅವರು ಸೂರ್ಯ, ಚಂದ್ರ ಇರುವ ತನಕ ಕಲಾ ಪ್ರಚಂಚದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ನನಗೆ ಅತ್ಯಂತ ಶ್ರೇಷ್ಠವಾದ ಸ್ಥಾನವನ್ನು ನೀಡಿರುವ ಚಾಮರಾಜನಗರವೇ ನನಗೆ ಸ್ವರ್ಗದ ಬಾಗಿಲು ಎಂದು ಹೇಳುತ್ತಿದ್ದರು. ಡಾ.ರಾಜ್ ಮಹಾ ಪುರುಷರು, ಅವರ ಜೀವನ ಮೌಲ್ಯಗಳು, ಜೀವನ ಸಂದೇಶಗಳು, ಸಾಮಾಜಿಕ ಕಳಕಳಿ ವರ್ಣನೆಗೆ ನಿಲುಕದ್ದು. ಮಯೂರ, ಬಬ್ರುವಾಹನ, ಕೃಷ್ಣದೇವರಾಯ, ಕನಕದಾಸರು, ರಾಘವೇಂದ್ರಸ್ವಾಮಿ, ರಾಮಚಂದ್ರ, ಕೃಷ್ಣ ಈ ಪಾತ್ರಗಳಲ್ಲಿ ಪ್ರತಿರೂಪವಾಗಿದ್ದರು ಎಂದರು.

  ಗಾಯಕಿ ಎಸ್.ಜಾನಕಿ ಅವರು ತಮ್ಮ ಗಾಯನದ ಮೂಲಕ ಸ್ವರ್ಗದ ಬಾಗಿಲು ತೆರೆಯುವಂತೆ ಮಾಡುತ್ತಿದ್ದರು. ಅವರ ಜನ್ಮದಿನಾಚರಣೆಯನ್ನು ಚಾಮರಾಜನಗರದಲ್ಲಿ ಡಾ. ಬಾಲಸುಬ್ರಹ್ಮಣ್ಯಂ ಕಲಾವೇದಿಕೆ ಮೊಟ್ಟಮೊದಲು ಆಚರಣೆ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದದ್ದು ಎಂದರು.
  ಪ್ರಶಸ್ತಿ ಪ್ರದಾನ : ರಂಗಭೂಮಿ ಕಲಾವಿದರಾದ ಹರದನಹಳ್ಳಿ ನಟರಾಜು, ನಂಜೇದೇವನಪುರ ಪುರುಷೋತ್ತಮ, ವಿ.ಮಹದೇವಯ್ಯ,ವೆಂಕಟರಮಣಸ್ವಾಮಿ, ಗೋವಿಂದರಾಜು, ಮಲ್ಲಯ್ಯನಪುರ ಎಂ.ಎನ್.ಮಹದೇವ, ಗೋವಿಂದರಾಜು ಅಮ್ಮನಪುರ, ನಾಗರಾಜು ನಂಜನಗೂಡು ಅವರಿಗೆ ಡಾ. ರಾಜ್‌ಕುಮಾರ್, ಎಸ್.ಜಾನಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಉದ್ಯಮಿ ಎ.ಜಯಸಿಂಹ, ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್, ಬರಹಗಾರ ಲಕ್ಷ್ಮೀನರಸಿಂಹ, ರೋಟರಿ ಮಾಜಿ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ ಮಾತನಾಡಿದರು. ಆರ್. ಮೂರ್ತಿ, ಹಿರಿಯ ರಂಗಭೂಮಿ ಕಲಾವಿದ ಘಟಂ ಕೃಷ್ಣ, ದೊರೆಸ್ವಾಮಿ, ವೇದಿಕೆ ಅಧ್ಯಕ್ಷ ಶಿವು, ಜೋಸ್ೆ, ಕಾರ್ಯದರ್ಶಿ ರಾಜಣ್ಣ, ಮಹೇಶ್ ಕುಮಾರ್, ಬಂಗಾರು ಇತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts