ಗ್ಲುಕೋಸ್ ಬಾಟಲ್​ ಬದಲಾಯಿಸಿದ್ದ ಸೆಕ್ಯುರಿಟಿ ಗಾರ್ಡ್‌ ಸಸ್ಪೆಂಡ್‌

ಚಾಮರಾಜನಗರ: ವೈದ್ಯರು ಹಾಗೂ ನರ್ಸ್​ ಇಲ್ಲದ ವೇಳೆ ರೋಗಿಯೊಬ್ಬರ ಗ್ಲುಕೋಸ್ ಬಾಟಲಿಯನ್ನು ಬದಲಾಯಿಸಿದ್ದ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಸೆಕ್ಯುರಿಟಿ ಗಾರ್ಡ್‌ ಗ್ಲುಕೋಸ್‌ ಬದಲಾಯಿಸಿದ್ದು ಸರಿಯಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿಯು ಸತೀಶ್‌ನ್ನು ಸೆಕ್ಯೂರಿಟಿ ಕೆಲಸದಿಂದ ಕಿತ್ತೊಗೆದಿದೆ.

ಜ.8ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಅಳವಡಿಸಿದ್ದ ಗ್ಲುಕೋಸ್ ಮುಗಿಯುವ ಹಂತಕ್ಕೆ ಬಂದಿತ್ತು. ಈ ವೇಳೆ ವೈದ್ಯರು, ದಾದಿಯರು ಇರಲಿಲ್ಲ. ಆಗ ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್‌ ಸತೀಶ್ ಗ್ಲುಕೋಸ್ ಬಾಟಲಿಯನ್ನು ಬದಲಿಸಿದ್ದ.

ಒಂದು ವೇಳೆ ಖಾಲಿಯಾಗಿದ್ದ ಗ್ಲುಕೋಸ್ ಬಾಟಲಿಯನ್ನು ತಕ್ಷಣ ಬದಲಿಸದೆ ಇದ್ದಿದ್ದರೆ ಅದು ರೋಗಿಯ ರಕ್ತವನ್ನೆ ವಾಪಸ್ ಎಳೆದು ರೋಗಿಗೆ ಅಪಾಯ ಉಂಟಾಗುವ ಸಾಧ್ಯತೆಗಳಿದ್ದವು ಎನ್ನಲಾಗಿದೆ.

ಗ್ಲುಕೋಸ್‌ ಬಾಟಲ್‌ನ್ನು ಬದಲಾಯಿಸಿದ್ದು ಮಾನವೀಯತೆಯಾದರೂ ಯಾವುದೇ ಅನುಭವವಿಲ್ಲದೆ ಬದಲಾಯಿಸಿದ್ದರಿಂದ ತೊಂದರೆಯಾಗಿದ್ದರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. (ದಿಗ್ವಿಜಯ ನ್ಯೂಸ್​)

One Reply to “ಗ್ಲುಕೋಸ್ ಬಾಟಲ್​ ಬದಲಾಯಿಸಿದ್ದ ಸೆಕ್ಯುರಿಟಿ ಗಾರ್ಡ್‌ ಸಸ್ಪೆಂಡ್‌”

  1. ಎಷ್ಟೋ ವಿಷಯಗಳಿಗೆ ಅನುಭವವೇ ಬೇಕಿಲ್ಲ. ಸಾಮಾನ್ಯ ಜ್ಞಾನವಿದ್ದರೆ [common sense] ಸಾಕು.

Leave a Reply

Your email address will not be published. Required fields are marked *